ಎತ್ತಲಿಂದ ಬಂದೆ ಎನ್ನ ಒಗೆತನಕೆ ಎಲೆಖೋಡಿ ಸವತಿಎತ್ತಲಿಂದ ಬಂದೆ ಎನ್ನ ಒಗೆತನಕೆ ಪ
ಕತ್ತಲು ಬೆಳುದಿಂಗಳಂತಾಯಿತುಮಿತ್ತು ಎತ್ತಲಿಂದ ಬಂದು ಸೇರಿತುಬಂದು ಎದುರಿಗೆ ಹಲ್ಲ ತೆರೆದಳುಒಂದು ಮಾತನು ಆಡದೆನ್ನೊಳುಒಂದನ್ನು ಸೇವೆಗೆ ಬರಗೊಡಳುಸಂದಿಯಲಿ ಲೊಟಕೆಯ ಹಾಕುತಲಿಹಳು1
ಹಾಲೊಳು ವಿಷವ ಹೊಯ್ದಂತೆ ಮಾಡಿದಳುಇಲ್ಲವನೆ ಹೇಳಿ ಕಾಲಕಾಲಲಿ ಎನ್ನ ಒದೆಸಿದಳುಬೇಳ ಮೇಳದಿ ತೊಡೆಯ ಮೇಲೆ ಹೊರಳಿಮೇಲೆಯೆ ಮೀಸೆಯ ಹುರಿ ಮಾಡುವಳು 2
ನೆರಳ ನೀರೊಳು ಬಗ್ಗಿ ನೋಡುವಳು ಎಬ್ಬಿ ತೆಗೆದುಮರಳಿ ಮರಳಿ ಒಡವೆಯ ನಿಡುವಳುಹೊರಯಿಕೆ ಒಳಯಿಕೆ ಮುರುಕಿಸಿ ನಡೆಯುತಲಿರೆ ಗಂಡಸು ಎಂದು ಅಣಕಿಸುತಿಹಳು3
ಮೋರೆಯನೀಗ ಎನಗೆ ತೋರಿಸಳುಸೀರೆ ಕುಪ್ಪುಸವ ಆರು ಕಾಣದಂತೆ ಉಡುವಳುದಾರಿಯ ಹಿಡಿ ನೀನಿರಬೇಡೆಂಬಳುನೂರು ಬಾರಿಯು ಸಾರಿದೆನೆಂಬಳು 4
ಒಗೆತನ ಕೊಂಡಳು 5
ಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನತಾನಾಗಿ ಇರುವನವನ6
ಪತಿ ಚಿದಾನಂದ ಮೂರುತಿ ತಾನಾದವನು7