ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ ನರಿಗಳ ಕೂಗಿಗೆ ಹುಲಿಯಂಜುವುದೆ ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ ಹೀನ ಜನರು ಅಪಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ 1 ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು ಮುಂದೆ ಎನಗೆ ಬಲು ತೊಂದರೆಗಳಿರುವು ವೆಂದು ಪೇಳುವರು ಮಂದರಧರನ 2 ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು ಘನತೆ ಎಂತೆಂದು ಜರಿಯುತಲಿಹರು ಮನವನರಿಯರು ಧನ ಪಿಶಾಚಿಯನು ಮನದಿಂದ ತೊಲಗಿಸಿ ಮನದಲಿ ನೆಲಸಿಹ ವನರುಹ ನಯನನ 3 ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ ಜಂಭದ ಮಾತ ನಂಬದೆ ಇರಲು ಹಂಬಲಿಸುವರು ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲಿವೀಯುತವ ಅಂಬುಜನಾಭನ 4 ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ ಗತಿ ತೋರುತಲಿರೆ ಚತುರತೆಯೇತಕೆ 5
--------------
ವಿದ್ಯಾಪ್ರಸನ್ನತೀರ್ಥರು
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು