ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ ಸುಮನಸರ ಜನನಿ ನಿನ್ನಮಲಪದ ತೋರೆ ಪ. ಲೋಕಸುಂದರಿ ಎನ್ನ ಶೋಕಗಳ ತರಿದು ಅವ ಏಕಮನಸು ನೀಡೆ ಶ್ರೀ ಕಳತ್ರನ ಪದದಿ ನೀ ಕರುಣಿಸಿದನೆ ನನಗನೇಕ ಜನ್ಮದಲಿ 1 ಪತಿ ಎಂದೆಂದಿಗೆ ತೊಲಗದಂದದಲಿ ನೀಡೆ ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ ನಂದಕಂದನ ತೋರಿ ಕುಂದು ಪರಿಹರಿಸೆ 2 ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ಕಾಪಾಡೆ ಸತತದಲಿ ಕಾರುಣ್ಯಶಾಲಿ ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ ರೂಪ ರೂಪಾಂತರದ ವ್ಯಾಪಾರ ತಿಳಿಸೆ 3
--------------
ಅಂಬಾಬಾಯಿ