ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1 ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2 ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4 ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5
--------------
ಶ್ರೀಪಾದರಾಜರು
ತಿಳಿವಿಕೆ ನೋಡಣ್ಣಾ ಪ ಉಬ್ಬುಸಗೊಳುತಲಿ ಹುಡುಕುತ ತಂದು | ಒಬ್ಬರ ಪದ ಪದ್ಯಗಳನೇ ಹಳಿದು | ಉಬ್ಬುಬ್ಬಿ, ಹೇಳುವ ತನ್ನದೆಂದು 1 ಹಂಬಲಿಸದೆ ಮೃದು ತಂಪಿನ ಯಲಿಯಾ | ಬೆಂಬಿಸ ದಾರಿಸಿ ಮುಳ್ಳಿನ ಕೊನೆಯಾ | ತಿಂಬುವ ಒಂಟೆಯ ಮತಿಪರಿಯಾ 2 ಪರಿಪರಿ ಶೃಂಗಾರದ ಕಲೆಯಂಗಳು | ಪರಿ ಅರೆಯದೆ ಇರಲು | ಕೊರತೇನು ಪತಿವ್ರತೆ ಗುಣಗಳು 3 ಸಾರಸ ತಿಳಿಯದೇ ನೋಡಾ| ನಿಬ್ಬಿರೆನುತಾ ಬಿಟ್ಟವ ಬಲು ಮೂಢಾ | ಹಬ್ಬುವಾ ಚಾತುರತನ ಕೂಡಾ 4 ಬರೆ ಬೀರುತ ಮಾತುಗಳನೆ ಬಚ್ಚಾ | ಧರೆಯೊಳು ಹೆಮ್ಮಿಗೆ ಬಿದ್ದನು ಹುಚ್ಚಾ | ಗುರು ಮಹಿಪತಿ ಸುತ ಪ್ರಭು ಮೆಚ್ಚಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾಷೆ ಹೀನರ ಆಸೆ ಪ್ರಾಣಗಾಸಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇಸತ್ತು ಬೇಲಿ ಮೇಲೊರಗಿದಂತೆ ಪ.ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |ಮಳೆಯ ರಭಸಕೆ ಮರವನೇರಿ ಕುಳಿತಂತೆ |ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ 1ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |ತೃಷೆಗಾರದವ ತೆವರ ತೋಡಿದಂತೆ ||ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ 2ಹುಸಿಯನಾಡುವರಾಸೆ ಪುರುಷ ನಾರಿಯ ವೇಷಬಿಸಿಲುಗುದಿರೆಯಭಾವ ಒಂದೆ ಕಾಣೊ ||ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |ಎಸೆವ ಪಾದದ ಸೇವೆ ಪರಮಸುಖ ಮನುಜಾ 3
--------------
ಪುರಂದರದಾಸರು