ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರಿ ತೋಚದಲ್ಲಾ ನನಗೆ ಏನು ಪ ನೀರಜಾಕ್ಷ ನಿನ್ನ ನೊಲಿಸುವ ಅ.ಪ ವಿಧಿ ಸಾಧಿಸುತ ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು 1 ದಂಡಕಾಲ ಕಳೆದುದಯ್ತು ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ 2 ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ 3 ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ4 ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ 5 ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ 6 ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ7 ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ8 ನಿನಗೆ ಯೆನ್ನ ಪೊರೆಯೆ ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ 9
--------------
ಕೃಷ್ಣವಿಠಲದಾಸರು
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು