ಹೊಯ್ಯಂದ ಡಂಗುರವ
ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ
ಅರವ್ಹೆ ಅಂಜನವಾಗಿ ದೋರುತಲದಕೊ ಹೊ
ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ 1
ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ
ಮನವಿಗೆ ಆರುವಾಗಿ ದೋರುತಲದಕೊಹೊ
ನೆನವ ಘನವಾಗಿ ಸೂಸೂತಲಿದಕೊ ಹೊ
ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ 2
ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ
ದ್ವಾದಶ ನಾದವು ಸಾಧಿಸಿ ಕೇಳುದು ಹೊ
ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ
ಓದುವ ಒಂಕಾರ ನಾದವು ತಿಳಿವದು ಹೊ 3
ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ
ಹನ್ನೊಂದು ಹತ್ತುಸಾವಿರದ ನೂರೆಂದು ಹೊ
ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ
ಪುಣ್ಯಗತಿಗೈದಿಸುವ ಜಪವಿದು ಹೊ 4
ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ
ಆಶಿಗೈವವಗಿನ್ನು ಭಾಸಿಸಲರಿಯನು ಹೊ
ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ
ಹೊಯ್ಯೆಂದ ಡಂಗುರವ 5