ಗುರುಸತ್ಯವರರೆಂಬ ಕಲ್ಪಭೂಜಾ
ಧರೆಯೊಳಗೆಮ್ಮನುದ್ಧರಿಸ ಬಂತಿದಕೊ ಪ
ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ
ರಾಮ ವೇದವಾಸ್ಯರಂಘ್ರಿ ಯುಗಳ
ವ್ಯೋಮ ಮಂಡಲವನಾಶ್ರಯಿಸಿ ಸತ್ಕೀರ್ತಿನಿ
ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ 1
ಭವವೆಂಬ ಭಾಸ್ಕರತಪದಿಂದ ಬೆಂದು ಬಂ
ದವರ ಮಂದಸ್ಮಿತ ನೆಳಲಿಂದಲೀ
ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ
ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ 2
ಕರ್ಮ ಜ್ಞಾನ ಮಾರ್ಗಸ್ಥ ಜನರಿಗಾಗಿ
ಲ್ಲಿಹವು ಫಲ ಪುಷ್ಪ ಐಹಿಕಾಮುಷ್ಮಿಕಾ
ಭುಜಗ ಹೃ
ದ್ಗುಹದೊಳಿಪ್ಪದು ಮಾಯಿಮೂಷಕಗಳೋಡಿಸುತ 3