ಕದರಿ ನರಹರಿ ವಿಠಲ | ಮುದದಿ ಪೊರೆ ಇವಳಾ ಪ
ಬೆದರಿ ಬೆಂಡಾಗಿ ತವ | ಪದಕೆ ಬಿದ್ದಿಹಳಾ ಅ.ಪ.
ಬನ್ನ ಬವಣೆಗಳೇ ?ಇನ್ನು ಪೇಕ್ಷಿಸದೆ ಕಾ | ರುಣ್ಯ ವೀಕ್ಷಣ ತೋರೊಪನ್ನಂಗಶಯ್ಯ ಹರಿ | ಮನುಜ ಮೃಗವೇಷಾ 1
ಸ್ವಾಪದಲಿ ನೀ ತೋರ್ದ | ಆಸನಿಯ ಅಂಕಿತವ ಪ್ರಾಪಿಸಿಹೆ ಇವಳಿಗೆ | ಶ್ರೀಪತಿಯೆ ಕೇಳೋ |ನೀ ಪಾಲಿಸುತ್ತಿವಳ | ತಾಪತ್ರಯಗಳ ಕಳೆಯೆಹೇ ಪಯೋಜ ಭವನುತ | ಪಾಪಾತಿದೂರಾ 2
ಪಾದ | ಪದ್ಮಗಳ ಭಜಿಪಾಮುಗ್ದೆಯನು ಪೊರೆಯೆಂದು | ಮಧ್ವಾಂತರಾತ್ಮಕನೆಬುದ್ಧಿ ಪೂರ್ವಕ ಬೇಡ್ವೆ | ಶ್ರದ್ಧೆ ಪತಿಸುತನೇ 3
ಐಹಿಕಾಮುಷ್ಮಿಕದ | ಬಹು ಪರಿಯ ಸುಖ ಸೌಖ್ಯಶ್ರೀಹರಿಯೆ ಕರುಣಿಸುತ | ಕಾಪಾಡೊ ಇವಳಾಸ್ನೇಹ ಸತ್ಸಂಗದಲಿ | ಪಾಲಿಸುತ ನೀನಾಗಿಮೋಹ ಮಮತೆಯ ಕಳೆದು | ಸಾಧನವ ಗೈಸೋ 4
ತರಳ ಪ್ರಹ್ಲಾದನನ | ಪೊರೆಯಲಿಲ್ಲವೆ ಹರಿಯೆವರ ಧ್ರುವನನ ಪಾಂಚಾಲಿ | ಅಜಮಿಳರ ಪೊರೆದೆಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಪೊರೆಯ ಬೇಕಿವಳ ಬಹು | ಕಾರುಣ್ಯದಲಿ ಹರಿಯೇ 5