ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ
ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ.
ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1
ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2
ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3
ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4
ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5
ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6
ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7