ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ
ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ
ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ 1
ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು
ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು 2
ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ 3
ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು
ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು 4
ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ-
ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ 5