373ಶಿವನು ನೀನಾದರೆ ಶಿವನ ರಾಣಿ ನಿನಗೇನೊ
ಅವಿವೇಕ ಮನುಜ ಈ ಮಾತು | ಈ ಮಾತು ಕೇಳಿದರೆ
ಕವಿಜನರು ನಗರೆ ಕೈ ಹೊಡೆದು 1
374ಎಲ್ಲ ಬಂದೇ ಎಂಬ ಖುಲ್ಲ ಮಾನವ ನಿನ್ನ
ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ
ಇಲ್ಲವೇ ಜನನಿ ಭಗಿನೇರು 2
375ಬಿಂಬವೊಂದೆ ಪ್ರತಿಬಿಂಬ ವೊಂದೆಂಬಿ ಈಶು
ದ್ಧಾಂಬರದ ನೆರಳು ಕಪ್ಪಾಗೆ | ಕಪ್ಪಾದ ಬಳಿಕ ನೀ
ನೆಂಬೊ ಈ ಮಾತು ಪುಸಿಯಲ್ಲಿ 3
376 ಎಲ್ಲ ಒಂದೆ ಎಂಬ ಸೊಲ್ಲು ಖರೆಯೆಂತೆನಲು
ಖರೆಯೆಂಬ ಮಾತುಗಳು
ಸುಳ್ಳೆನ್ನರೇನೊ ಸುಜನಾರು 4
377 ನಿಮ್ಮ ನಾ ಬೈದರೆ ನಮ್ಮ ನೀವ್ ಬೈದರೆ
ಅದ್ವೈತ ಸುಮ್ಮನಿರಬೇಕು ಎಲೊ ಭ್ರಾಂತ 5
378 ಶುದ್ಧ ಬ್ರಹ್ಮನ ಸುಂಗುಣವ ಕದ್ದ ಪ್ರಯುಕ್ತ ಪ್ರ
ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೊ
ಉದ್ಧಾರವೆಲ್ಲೊ ಭವದಿಂದ 6
379 ಮಾಯವಾದಿಯ ಮತವು ಹೇಯವೆಂಬುದು ಸಿದ್ದ
ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ
ಬಾಯಿ ಬಿಟ್ಯಾಕೊ ಆಳುತಿದ್ದಿ 7
380 ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ
ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ
ತಲ್ಲೊ ಜಾರತ್ವ ಇದರಂತೆ 8
381ಮೇ ಮಾತೆ ವಂಧ್ಯೆಯೆಂಬ ಈ ಮಾತಿನಂತೆ ಮು
ಅಪುಸಿಯಿಂಬೀ ಮಾತುಗಳು
ಭ್ರಾಮಕವೆ ಖರೆಯೊ ನಿಜವಲ್ಲ 9
382 ಶಶವಿಷಾಣಗಳೆಂದು ಒಪ್ಪುವರೆ ಬಲ್ಲವರು
ಮೊಲೆಹಾಲು ಉಂಡಿತೋ
ರಿಸೊ ಮಿಥ್ಯೆ ಸತ್ಯವಹುದೇನೊ 10
383ಸತ್ಯವೆಂದರೆ ಖರೆಯು ಮಿಥ್ಯೆಯೆಂದರೆ ಸುಳ್ಳು
ನ್ಮತ್ತ ಈ ಮಾತು ನಿಜವೆಲ್ಲಿ 11
384ಭೀತಿ ನಿರ್ಭೀತಿ ಶೀತತಾಪಗಳೊತ್ತಟ್ಟು ನೀತವಾಗಿಹವೆ ಜಗದೊಳು |ಜಗದೊಳಿದ್ದರೆ ತೋರು
ಜಾತಿ ಭೇದಗಳು ಇರಲಾಗಿ 12
385 ಜೀವೇಶರೊಂದೆಂಬ ಈ ಮಾತು ಕೇಳ್ವರಿಗೆ
ಕೇವಲ ಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು
ಗಾವಿ ನೀನೆಂದು ಕರೆಯಾರೆ 13
386 ಗುಣವಂತನೆಂಬ ಈ ಮಾತನು ಕೇಳಿ ಸುಖಿಸದವ
ಮನುಜ ಪಶುಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ
ಗಣನೆ ಮಾಡದಲೆ ಬಯ್ವೋರ 14
387ಮಲದ ಗರ್ತಕೆ ಶುದ್ಧ ಜಲಧಿ ಸಮಯವೆಂತೆಂಬಿ
ಕಲುಷವರ್ಜಿತಕೆ ತೃಣಜೀವ | ತೃಣಜೀವ ಸರಿಯೆ ಸಿಂ
ಬಳಕ ಗೋಘೃತವು ಸಮವಹುದೆ 15
388 ಐರಾವತಕೆ ಸರಿಯೆ ಕೂರಿಹೇನಿನ ಮರಿಯು
ತೋರಿತೊ ನಿನ್ನ ಅಜ್ಞಾನ 16
389 ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ
ಶ್ವಾಸ ಮಾಡದಲೆ ಜೀವೇಶ | ಜೀವೇಶಕೈಕ್ಯೋಪ
ದೇಶ ಮಾಡಿದವ ಚಂಡಾಲ 17
390ಅಜರಾಮರಣ ಬ್ರಹ್ಮ ಭುಜಗಭೂಷಣ ಪೂಜ್ಯ
ತ್ರಿಜಗ ದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ
ಅಜಗಜನ್ಯಾಯ ಪುಸಿಯಲ್ಲ 18
391 ಪಾಲುಗಡಲೊಳಗಿಪ್ಪ ಶ್ರೀ ಲೋಲ ಹರಿಯೆಲ್ಲಿ
ಹೇಲುಚ್ಚೆವೊಳಗೆ ಹೊರಳುವ | ಹೊರಳಾಡಿ ಬಳಲುವ
ಖೂಳ ಮಾನವನೆ ನೀನೆಲ್ಲಿ 19
392 ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯ ಶ್ಲೇಷ್ಮ ಭಾ
ಗೀರಥಿಗೆ ಸಮವೆ ಖರಮೂತ್ರ | ಖರಮೂತ್ರ ಜೀವ ಲ
ಕ್ಷ್ಮೀರಮಣಗೆಣೆಯೆ ಜಗದೊಳು 20
393ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ
ರ್ಗುಣ ಅಲ್ಪನೆನುತಿದ್ದಿ | ಎನುತಿದ್ದಿ ಹರಿಗೆ ದೂ
ಷಣೆಯು ಬೇರುಂಟೆ ಇದಕಿಂತ 21
394 ಈಶ ನಾನೆನಲು ಕೀನಾಶನಿಂದಲಿ ದಣಿಪ
ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ
ವಾಸದೊಳಿಟ್ಟು ಸಲಹೂವ 22
395ಈಶತ್ವ ವೆಂಬುದು ಲಕುಮೀಶಗಲ್ಲದೆ ಜೀವ
ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ
ಈಶ ಬಿಟ್ಟಿಹನೆ ಜಗದೊಳು 23
396 ಉದ್ಗೀಥಶ್ರೀ ಪ್ರಾಣ ಹೃದ್ಗತನು ಜಗದೇಕ
ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪರಿಗೆ ಯಮ
ಗದ್ಗದನೆ ನಡುಗಿ ನಮಿಸುವ 24
397 ಸ್ವಾಮಿ ಭೃತ್ಯನ್ಯಾಯ ಈ ಮಾತಿನೊಳಗುಂಟು
ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೊ
ನೀ ಮಾತ್ರ ನುಡಿಯೆ ಸಾಕೆಂಬೆ 25
398ಈಶ ನಾನೆಂದವನ ಶ್ವಾಸ ಬಿಡಗೊಡದೆ ಯಮ
ಸೆಳೆದೊಯಿದು ನರಕದೊಳು
ಘಾಸಿಗೊಳಿಸುವನೊ ಬಹುಕಾಲ 26
399 ಮಾತಾ ಪಿತರ ದ್ರೋಹಿ ಬಂಧು ಘಾತಕ ಬ್ರಹ್ಮ
ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀ ಜಗ
ನ್ನಾಥ ವಿಠಲನೆ ನಾನೆಂಬಿ 27