ಅಧ್ಯಾಯ ಹತ್ತು
ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ |
ಧ್ವನಿ
ಪರಿ ಪರಿ ಪ
ಗರುಡನೇರಿದ ಶ್ರೀನಿವಾಸನು ರಾಜ
ವರ ಹಂಸವನೇರಿದ ಬ್ರಹ್ಮನು
ತ್ವರ ನಂದಿಯೇರಿದ ರುದ್ರನು ಅ
ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1
ದೇವಿಯೇರಿದಳಾಗ ರಥದಲಿ ಬಕುಲಾ
ದೇವಿ ಯೇರಿದಳೊಂದು ರಥದಲಿ
ಕೇವಲ ತಮ್ಮ ತಮ್ಮ ರಥದಲಿ ಉಳಿದ
ದೇವಿಯರೇರಿ ಕೊಂಡರು ಅಲ್ಲಿ 2
ಉತ್ತಮ ಮಂಗಳವಾದ್ಯವು ನË
ಬತ್ತು ನಗಾರಿಗಳಾದವು
ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು
ವತ್ತಿ ಶಬ್ದಮಾಡಿ ನುಡಿದವು 3
ನಡೆದರು ಋಷಿಗಂಧರ್ವರು ಬಹು
ಸಡಗರದಿಂದಲ್ಲೆ ಅಪ್ಸರರು
ಬಡವ ಬಗ್ಗರು ಉಳಿದ ಮನುಜರು ಬಹು
ಗಡಿಬಿಡಿಯಿಂದಲ್ಲೆ ನಡೆದರು 4
ಕುಂಟರು ಕುರುಡರು ಕಲ್ಲು
ಕಂಟಕ ಕಾಲಿಲೆ ತುಳಿವವರೂ
ಗಂಟು ತಲಿಯಲಿಟ್ಟುನಡಿಯುವರು ತಪ್ಪ
ಗಂಟಾಗಿ ಒದರುತಲಿಹರು 5
ಕೆಲವರು ಗಂಡನ ಒದರುವರು ಮತ್ತ
ಕೆಲವರು ಮಕ್ಕಳನೊದರುವರು
ಕೆಲವರು ಎಡವುತಲಿರುವರು ಮತ್ತು
ಕೆಲವರು ಭರದಿಂದ ಬೀಳುವರು 6
ಕೆಲವರೆಳೆದು ಎಬ್ಬಿಸುವರು ಮತ್ತು
ಕೆಲವರು ನೋಡುತ ನಗುವವರು
ಬಾಲರಳುವ ಧ್ವನಿ ಆಯಿತು ಜಗತ್
ಪಾಲನಸೈನ್ಯ ನಡೆಯಿತು ಮೇಲಾದನಂ
ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7
ವಚನ
ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು
ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು
ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ
ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು
ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ
ಭೋಜನವು
ಎನ್ನ ಮೇಲೆ ಕರುಣಿಯಿಂದಾ 1
ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ
ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು
ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ
ಪುರದಲ್ಲೆ ಪೋಗುವುದು 2
ಮುನಿ ಮಂಡಲೇಶನು
ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ
ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ
ಕೇಳುತಲೆ ಮುಂದೆ
ಬಾಲಕನ ಮುಖನೊಡಿ
ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3
ಧ್ವನಿ:ವಸಂತಭೈರವಿ ಆದಿತಾಳ
ತರವೆ ಹರಿಯೆ ಈ ಪರಿಯ ಮಾಡುವದುಪ
ಸುಖಕರವಾಗಿಹ ಶುಕಮುನಿ ವಚನವು ||
ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1
ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ|
ಊಟಕೆ ಒಲ್ಲೆನೆಂಬುವದೂ 2
ಶ್ರೀಶ ಅನಂತಾದ್ರೀಶ ಮಹಾತ್ಮರ||
ಭಾಷೆಯ ಕೇವಲುದಾಸೀನ ಮಾಳ್ಪುದು 3
ವಚನ
ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ
ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು
ಮತ್ತು ಶುಕಮುನಿಗೆ
ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ
ಮಾಡಿ ವೃತ್ತಾದ
ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ
ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ
ಅರ್ಪಿಸಿದ ಭಕ್ತಿಯಿಂದ 1
ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ
ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ
ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ
ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ
ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ
ಶುಕ ಸತ್ವ ಶೀಲರು ಉಳಿದ
ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2
ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು
ಕೂಡಿ ವಾದ್ಯ ವೈಭವ
ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ
ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ
ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು
ವೈಭವದಿಂದ ಸಿದ್ಧನಾಗಿ3
ಧ್ವನಿ:ಕಾಂಬೋಧಿ ಆದಿತಾಳ
ಆಕಾಲದಲಿ ಕಂಡನು ಹರಿಯಮುಖ
ಆಕಾಲದಲಿ ಕಂಡನು ಎಲ್ಲರ ಕೂಡ
ಆಕಾಶ ರಾಜನು ತಾನು1
ಹರುಷದಿಂದಲಿ ಉಬ್ಬಿದ ಹರಿಯ ಕಂಡು
ಹರುಷದಿಂದಲಿ ಎದರುಗೊಂಡು
ವರಪೂಜೆಯನು ಮಾಡಿದ 2
ಅಳಿಯಗಾಭರಣವನು ವಸ್ತ್ರವ ಕೊಟ್ಟು
ಅಳಿಯಗಾಭರಣವನು ಉತ್ಸವದಿಂದೆ
ಕಳಿಸಿ ಮನೆಗೆ ಪೋದನು3
ಶ್ರೀನಾಥದೇವ ತಾನು ಆ ಕಾಲಕ್ಕೆ
ಶ್ರೀನಾಥದೇವ ತಾನು ಕರೆದುತೊಂಡ
ಮಾನರಾಜಗೆ ನುಡಿದನು 4
ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ
ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ
ಹಸನಾಗಿ ಮಾಡಿಸೆಲ್ಲ5
ಅಕ್ಕರದಲಿ ರಾಜನು ಆನುಡಿ ಕೇಳಿ
ಅಕ್ಕರದಲಿ ಮಾಡಿಸಿದನು
ರುಕ್ಕೋತದಡಿಗೆಯನು 6
ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು
ತೊಂಡಮಾನÀನು ಚಂದಾಗಿ 7
ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ
ಹರಿಯು ಭೋಜನ ಮಾಡಿದ 8
ಆನಂದದಿಂದಿದ್ದನು ಆ ರಾತ್ರಿಯೊಳ್
ಆನಂದದಿಂದಿದ್ದನು ಮಾಡಿದ ನಿದ್ರೆ
`ಅನಂತಾದ್ರೀಶ' ತಾನು 9
ವಚನ
ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ
ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ
ತಾನು ಐವರು ಅನ್ನಹೀನರಗಿರುವುದು ಖೂನದಲಿ
ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು
ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು
ಖೂನದಲಿ ಕನ್ನಿಕೆಯ ದಾನಪರ್ಯಂತ 1
ಪೇಳು ಅರಸನಿಗೆಂದು
ಹರಿಯು ಹೇಳಿದಂತಾ
ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ
ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ,
ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ
ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ
ಕಾಲನಡುತಿಯಲೆ ಹರಿಯ ಆಲಯಕೆ ಬಂದ 2
ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು
ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ
ಶಾವಿಗೆಯ ಪರಮಾನ್ನ
ವಿಯದ್ರಾಜ ಮುಂದಾ
ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ
ಬಂದನು ಮನೆಗೆ ತೀವ್ರದಿಂದ 3
ಆಕಾಲದಲಿ ತೋಂಡ
ಸತಿ ನಿವಾಳಿಸುವತ ಚಲ್ಲಿದಳು
ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ
ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ
ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ
ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ
ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು
ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4
ತೊಳೆದು ಆ ಉದಿಕ
ಮಧುಸೂದನನ
ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ
ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ
ಮದನ ಮೋಹನ ಸನ್ನಿಧಿಗೆ
ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ
ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ
ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ
ಕಾಲಕ್ಕೆ ಮಧುರÉೂೀಕ್ತಿಯಿಂದ5
ಧ್ವನಿ:ಸೌರಾಷ್ಟ್ರ ಅಟತಾಳ
ಸಾವಧಾನ ಧೇ
ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ
ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ
ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1
ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ
ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2
ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ
ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3
ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ