ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗುಂಟೋ ಆಗುಂಟೋ ಈ ದೇಹ ಏಗಬಲ್ಲರು ಯಾರು ಈ ಜಗದ ಗುಂಟ ಪ ನಾಲ್ಕು ದಿನ ಇರುವಾಗ ಚೆನ್ನಾಗಿ ಇರಬೇಕು ನಾಲ್ಕಾರು ಜನರಿಗೆ ಉಪಕಾರ ಮಾಡಬೇಕು ಬಾಲೆ ಸರಸತಿಗೆ ಪರಧನಕೆ ವಸ್ತುವಿಗೆ ಏಕೆ ಹಾಳು ಮನವನು ನಿಲಿಸಿ ಕೆಡಿಸಬೇಕು 1 ಹಾರುವ ಮನವನ್ನು ಕಟ್ಟಿ ಹಾಕಬೇಕು ಹಾರುವನ ಕಂಡರೆ ತಡೆಯಬೇಕು ಹಾರಲೇಕೆ ಪರರ ಒಡವೆ ಕಂಡೊಡನೆಯೆ ಬಾರಿಬಾರಿಗೆ ಬರಿದೆ ಕೆಣಕಲೇಕೆ 2 ವಿಚಾರಿಸಿಕೋ ದೇವ ಶಿಷ್ಟರ ಭಂಟ ಊರೊಳಗೆ ಉಚಾಯಿಸುತಿದ್ದಾರೆ ಐದಾರು ಮಂದಿ ಎಚ್ಚರಿಕೆ ಹಾಕುತ್ತ ಇದ್ದಾರೆ ದುಷ್ಟ ಮಂದಿ ಎಚ್ಚರಿಸೊ ಉದ್ಧರಿಸೊ ನೆಂಟ ಜಾಜಿಪುರೀಶ3
--------------
ನಾರಾಯಣಶರ್ಮರು
ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ಪ ಬಾಗಿಲ ತೆಗೆಯವ್ವಾ ಸಾಗಿ ಬಂದಿಹನಯ್ಯಾ ಭೋಗಿ ಭೂಷಣ ಪ್ರಿಯ ಕೇಶವನ ದಾಸಾ ಅ.ಪ. ಸಂಸಾರ ಜಾಲದಲೀ ಸಿಲುಕಿ ಬೆಂದೇ ಸಂಸಾರ ಮಾಯದಲೀ ಹಿಂಸೆ ಮಾಡಿದವಯ್ಯಾ ಐದಾರುರಿಪುಗಳು ಸಂಶಯ ಪಡದೆ ಬಂದೇ ಶರಣೆಂದೇ 1 ಭವದೊಳುರಳಿ ಬಿದ್ದೆನೋ ಪ್ರಾಣಾಂತಕ ಸವೆದು ಕರಗಿ ಬೆಂದೆನೋ ಯುವತಿಯರೊಡಗೂಢಿ ಇಹವೆನ್ನೆ ನೆರೆನಂಬಿ ವಿವಿಧ ಕಷ್ಟವ ಪೊಂದಿ ಬಂದೇ ಶರಣೆಂದೇ 2 ಹಲವು ಜನ್ಮಗಳಿಂದ ನೋಡಲು ಬಂದೆ ಹಲವು ರೀತಿಗಳಿಂದ ನಳಿನ ನಾಭನ ದಿವ್ಯ ರೂಪವ ನೋಡುವೆ ನಳಿನಾಕ್ಷಿ ತಾಯ ಕೇಶವನ ಸೇರುವನು 3
--------------
ಕರ್ಕಿ ಕೇಶವದಾಸ