ನಿಧಾನವೆ ಕೇಳಿ ಸಜ್ಜನವೇ
ಇಂದು ಜಿನ ಶಕ್ತಿಯಾನಂದದಾರಾಧನ ಪ
ಒಂದು ಮನದಲಿ ವದಗಿನ್ನು
ಒಂದು ಮನದಲಿ ವದಗಿನ್ನು ನೀವೆಲ್ಲಾ
ವಂದದಾರುತಿಯಾ ಬೆಳಗುವಾ 1
ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ
ಒಂದನೆ ಭಕ್ತಿ ತಿಳಿದಿನ್ನು
ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ
ವಂದನಾರುತಿಯಾ ಬೆಳಗುವಾ 2
ಎರಡಕ ಮೀರದಾ ಎರಡಕ್ಷರದಿಂದ
ಎರಡನೆ ಭಕ್ತಿ ತಿಳಿದಿನ್ನು
ಎರಡನೇ ಭಕ್ತಿ ತಿಳಿದು ನಾರದರಂತೆ
ಎರಡನಾರತಿಯಾ ಬೆಳಗೀರೇ 3
ಮೂರು ಬಲಿಯನೆದಾಟಿ ಮೂರು ರತ್ನವಗಂಡು
ಮೂರನೇ ಭಕ್ತಿ ತಿಳಿದಿನ್ನು
ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ
ಮೂರನಾರತಿಯಾ ಬೆಳಗೀರೇ 4
ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ
ನಾಕನೇ ಭಕ್ತಿ ತಿಳಿದಿನ್ನು
ನಾಕನೇ ಭಕ್ತಿ ತಿಳಿದು ಜನಕನಂತೆ
ನಾಕನಾರತಿಯಾ ಬೆಳಗೀರೇ 5
ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ
ಐದನೇ ಭಕ್ತಿ ತಿಳಿದಿನ್ನು
ಐದನೇ ಭಕ್ತಿ ತಿಳಿದು ಗರುಡನಂತೆ
ಐದನಾರತೀಯ ಬೆಳಗೀರೆ 6
ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ
ಆರನೇ ಭಕ್ತಿ ತಿಳಿದಿನ್ನು
ಆರನೇ ಭಕ್ತಿ ತಿಳಿದು ಪುಂಡಲೀಕನಂತೆ
ಆರನಾರತಿಯಾ ಬೆಳಗೀರೆ 7
ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು
ಏಳನೇ ಭಕ್ತಿ ತಿಳಿದಿನ್ನು
ಏಳನೇ ಭಕ್ತಿ ತಿಳಿದು ಹನುಮಂತನಂತೆ
ಏಳನಾರತಿಯಾ ಬೆಳಗೀರೆ 8
ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು
ಎಂಟನೆ ಭಕ್ತಿ ತಿಳಿದಿನ್ನು
ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ
ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9
ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು
ಒಂಭತ್ತರನೇ ಭಕ್ತಿ ತಿಳಿದಿನ್ನು
ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ
ಒಂಭತ್ತನಾರತಿಯಾ ಬೆಳಗೀರೆ 10
ಗುರು ಮಹಿಪತಿ ಸುತಬ ಹೊರವ ದೇವಿಗೆ
ಧರಿಯೊಳೀಪರಿಯಲಿ ನೀವು
ಧರಿಯೊಳೀಪರಿ ನೀವು ಮಾಡಲಿಕೀಗ
ಪರಮ ಆನಂದಾದೋರುವದು 11