ಭವಗಳನು ಖಂಡಿಸೆಂದು ಬಂದು ಬೇಡಿದೆ ಪ
ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ
ಪರಮ ನೀನೆಯಾಗಿಯಾ ನಿಜದರುಹ ತೋರಿಸೈ 1
ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ
ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ 2
ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ
ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ 3
ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು
ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ 4
ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ
ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ5