ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ಪ. ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ ಮೋದಗುರುಗಳು ಬೋಧಿಸೆ | ದಯದಿ ಅ.ಪ. ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ ಐದು ಇಂದ್ರಿಯವು ಕಲೆತು ಕಾಯ ಐದಲಾರದು ಜೊತೆಗೆ ಕರ್ಮ ಒಂದು ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು ಮೋದವಾಗುತ ಮನದೊಳು ಆದಿದೈವನ ಕರುಣವಾದ ಬಳಿಕಿನ್ನೇನು ಪಾದಪದ್ಮವ ತೋರೆಲೊ | ಸ್ವಾಮಿ 1 ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ ಐದಿಸಿ ಮೂಲಸ್ಥಳಕೆ ಐದು ರೂಪಾತ್ಮಕನ ಆದರದಿ ಪೂಜಿಸುತ ಐದೊಂದು ದೂರ ತ್ಯಜಿಸಿ ಐದು ನಾಲ್ಕು ತತ್ವದಧಿಪತಿಗಳನು ಆದರದಿ ಧ್ಯಾನಮಾಡಿ ಐದು ಮೂರು ದಳದಿ ಆದಿತ್ಯನಂತಿರುವ ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2 ಐದು ಭೇದಗಳ ಮತ ಸ್ಥಾಪಕರ ಕರುಣದಲಿ ಐದು ಮೂರನೆ ಖಂಡಿಸಿ ಐದೆರಡು ರೂಪಕನ ಆದರದಿ ಸ್ತುತಿಸುತ್ತ ಭೇದಿಸಿ ಹೃದಯಗ್ರಂಥಿ ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ ಆದರದಿ ನಂಬಿ ಸ್ತುತಿಸಿ ಈ ದಾರಿ ಕಾಣಲು ಇದಕೆ ಕಾರಣದಿವ್ಯ ಮೋದ ಶ್ರೀಗುರು ಕರುಣವೋ | ದಯವೋ 3
--------------
ಅಂಬಾಬಾಯಿ
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಯಾರಿಗೆ ದೂರುವೆನು ವೆಂಕಟರಾಯ ಚಾರದ ಮಹಿಮೆಯನು ಪ ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ ಹೋರಾಟವನಿತ್ತು ಮಾರಿದೆಯೆನ್ನನು ಅ.ಪ ತೇಜವುಳ್ಳವನೊಬ್ಬನು ಐದನೆಯಲ್ಲಿ ಮೋಜಾಗಿ ಒಳಹೊಕ್ಕನು ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು ಪಾಜಿ ಮಾಡಿದನೆನ್ನ ಮೂಜಗದೊಡೆಯ 1 ಸೀತವಾದವನೊಬ್ಬನು ಅಷ್ಟಮದದಲ್ಲಿ ಕಾತುರದೊಳು ಬಂದನು ಘಾತಕತನ ಮಾಡಿ ಭೀತಿಗಳನು ತೋರಿ ದಾತ 2 ಮೂರನೆಯವನೊಬ್ಬನು ಏಳನೆಯಲ್ಲಿ ಸೇರಿಯೆ ಕಳುತಿದ್ದನು ಏರಿ ಬಂದುದನೆಲ್ಲ ಆರಿಸಿ ಮಾರಿಸಿ ಸೂರೆಗೊಂಡನು ಎನ್ನ ವಾರಿಜನಾಭ 3 ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ ಶತ್ರುವಾಗಿಯೆ ನಿಂತನು ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4 ಸುರಗುರುವೆಂಬುವನು ಮೂರನೆಯಲ್ಲಿ ಸ್ಥಿರವಾಗಿ ನಿಂತಿಹನು ಗುರುಗಳ ಮುಖದಿಂದ ಕರಕರೆ ಹತ್ತಿಸಿ- ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5 ಆರನೆ ಮನೆಯೊಳಗೆ ದೈತ್ಯರ ಆ- ಚಾರಿಯನು ನಿಂತಿಹನು ಹಾರುಮಾತುಗಳೇಕೆ ತೂರಿದನೆಲ್ಲವ ಪಾರಾದೆನು ನಾನು ವಾರಿಜನೇತ್ರ 6 ಆದಿತ್ಯ ಪುತ್ರನಾದ ಶನೈಶ್ವರ ಬಾಧಿಪ ಮನೆಗಳಾರು ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ ವೇದಗಳೆಲ್ಲವು ಏಳುಯೆಂಟಿರಲಿ 7 ನಾಡನಾಳುವ ರಾಯರ ಕೆಡಿಸಿ ಮುಂದೆ ಕಾಡಿಗೆ ಸೇರಿಸಿದ ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8 ವಾರಿಧಿ ಮಥನದಲಿ ಸುಧೆಯನ್ನುಂಡು ಸೇರಿದ ಗೃಹರೊಳಗೆ ಮೀರಿದರಿಬ್ಬರ ಪಾರುಪತ್ಯಗಳನ್ನು ಮಾರ ಸನ್ನಿಭನೆ 9 ಸಂಧಿ ಸಂಧಿಯಲಿವರು ಬಂದೆನ್ನನು ದಂದುಗ ಬಡಿಸುವರು ಇಂದ್ರಾದಿ ದೇವರಿಗಳವಲ್ಲ ಇವರೊಳು ಹಿಂದು ಮುಂದರಿಯೆನು ಬಂದ ಬವರವನ್ನು 10 ಶುಭದಲ್ಲಿ ಶುಭವಿತ್ತರು ವೆಂಕಟರಾಯ ಶುಭ ತೋರಿಸೊ ಅಭಯವನಿಪ್ಪಂಥ ವರಾಹತಿಮ್ಮಪ್ಪನೆ ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11
--------------
ವರಹತಿಮ್ಮಪ್ಪ
ವಿಜಯರಾಯ | ಗುರು | ವಿಜಯರಾಯ ಪ ವಿಜಯರಾಯ | ಗುರು | ವಿಜಯರಾಯ ಅ.ಪ. ಎರಡನೆ ಯುಗದೊಳು | ವಿ | ಸುರಲೀಲ ಕಪಿಯಾದ್ನೊ |ವಿ|ಹರಿಕಾರ್ಯಕನುವಾಗಿ | ವಿ | ಹರಿಕರುಣ ಪಾತ್ರನೆ | ವಿ | 1 ಭಂಜನ ಪಾದ | ವಿ | ಸುಕಮಲವ ಸೇವಿಸೆ | ವಿ |ಪ್ರಕಟಿ ಯಾದವರಲ್ಲಿ | ವಿ | ನಿಕಂಪಾನೆನಿಸೀದೆ | ವಿ | 2 ಪುರಂದರ ದಾಸರೋಳ್ ತುರುಕರು ನೀನಾಗಿ | ವಿ | ಹರಿಚರಿತೆ ಕೇಳಿದೆ | ವಿ |3 ಪರ ವಿದ್ಯಾರ್ಜಿಸಿದ್ಯೊ | ವಿ | 4| ಗುರು ವಾಜ್ಞದಿ ಮತ್ತೆ | ವಿ | ತಿರಿಪಾದ ಪೂರೈಸೆ ವಿ |ವರ ಭೂಸುರನಾಗಿ | ವಿ | ಹರಿಚರಿತೆ ಪೇಳಿದೆ | ವಿ | 5 ವತ್ಸರ ಮಾಸ | ವಿ |ಎರಡು ಐದನೆ ದಿನ | ವಿ | ಗುರುವಾರ ಪ್ರಹರದಿ | ವಿ | 6 ವರಯೋಗ ಮಾರ್ಗದಿ | ವಿ | ಗುರು ಗೋವಿಂದ ವಿಠಲನ | ವಿ |ಚರಣಾಬ್ಜ ಸೇರುತ | ವಿ | ಮೆರೆವೆ ಭಕ್ತರ ಮನದಿ | ವಿ |7
--------------
ಗುರುಗೋವಿಂದವಿಠಲರು
ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು