ಇತರೆಯಳ ಸುತನೆನಿಪ ಐತರೇಯ |ಗತಿಪ್ರದ ಶ್ರೀ ವಿಷ್ಣು ಸರ್ವಾಂತರಾತ್ಮಾ ಪ
ವಿಭೂತಿ ಪಾದ್ಯ ಹರಿಯೇ 1
ಕರ್ಮ ಕರ್ಮಾಂಗದಲಿಪ್ರಕಟವಾಗಲು ಅಲ್ಲಿ ಸನ್ನಿಹಿತನಿರುವೇ 2
ಭೂತ ಪಂಚಕದಲ್ಲಿ ಪಂಚಾತ್ಮ ನೀನಿದ್ದುಭೂತ ವಾಯುವಿನಲ್ಲಿ ಮತ್ತೆ ಪಂಚಾತ್ಮಾ |ಈ ತೆರದಿ ನೀನಿದ್ದು ಭೂತೇಂದ್ರಿ ಮಾನಿಸಹವಾತನಡೆಸುವುದೆಲ್ಲ ಯಜ್ಞವೆನಿಸುವುದು 3
ಇಂತಿಪ್ಪ ಯಜ್ಞದಲಿ ಸಂತ ಶ್ರೀಪಾದಾರ್ಯಅಂತೆ ತಮ ಶಿಷ್ಯ ಸಹಕೃತ ಸುಮಂಗಳದಲಿ |ಧ್ವಾಂತ ಹರ ಶ್ರುತಿಯನ್ನೆ ಐತರೇಯದಿ ವಾಚ್ಯಪಂಥಬಿಧ ಸರ್ವರಿಗೆ ಒಲಿಯೆ ಪ್ರಾರ್ಥಿಸುವೇ 4
ಪರಮ ಹಂಸರು ಎನಿಪ ವಿಶ್ವೇಶ ತೀರಥರವರ ಸುನೇತೃತ್ವದಲಿ ಮಂಗಳದ ಕಾರ್ಯ |ಪರಕಿಸುವ ಸೌಭಾಗ್ಯ ದೊರಕಿದವನಿಗೆ ಭಾಗ್ಯಹರಿ ಗುರು ಗೋವಿಂದ ವಿಠಲ ಕರುಣಿಸುವ 5