ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ
ನಾಗಶಯನನವ ಕೂಗದೆ ಬಾರನೆ ಅ.ಪ
ಪೂತನಿ ಶಿಶುಗಳ ಫಾತಿಸುತಿಹಳೆಂಬ
ಮಾತನವಗೆ ಪೇಳೆ ಭೀತಿಯತೋರಿ
ಆತುರದಿಂದವ ಐತರುವನೆ ಸಖಿ
ಪ್ರೀತಿಯೊಳೀವೆನೀ ರತುನದ ಹಾರವ 1
ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ
ಮೊರೆಯಿಡುವುದ ಹೇಳೆ ಭರದಲಿ ಬರುವ
ಉರಗನ ಗರಳದಿ ಕರುತುರು ನೋಯುವ
ಪರಿಯ ಬಿತ್ತರಿಸಿ | ಮುರಳೀಧರಗೆ 2
ಸಂಗಡ ಬರದಿರೆ ಭಂಗಿಸುವರು ಗೋ
ಪಾಂಗನೆಯರು ಎಂದು ರಂಗಗೆ ಹೇಳೇ
ಇಂಗಿತಜ್ಞನು ನಮ್ಮ ಮಾಂಗಿರಿಯರಸನು
ಸಂಗಡ ಬರುವನು ಸಂದೇಹವಿಲ್ಲ 3