ಕಾಲ ಕಳೆಯುವಿ ನಮ್ಮ
ಐಕೂರಾರ್ಯರ ಸುವಾಕು ಕೇಳದೆ ಜೀವಿ ಪ
ಮರುತಾಗಮ ಮರ್ಮವರಿಯದವರಿಗೆಲ್ಲಾ | ವರ ಭಾಗವತ
ಗೀತಾ ಹರಿಕಥಾ ಮೃತ ತತ್ವ | ಯರಡೊಂದು ಕಾಲ
ಕೃಪೆ ನೆಳಲಾಶ್ರಯಿಸದೆ 1
ಹರಿಮೂರ್ತಿ ಹರಿವ್ಯಾಪ್ತಿ ಹರಿಸತ್ಯ ಸುಚರಿತ್ರೆ |
ಹರಿದಾಸರುಕ್ತಿ | ಹಿರಿದು ಕಿರಿದು ಭೇದ ನೆರೆ |
ಸುರಹಸ್ಯವನರುಹಿ ಕಗ್ಗತ್ತಲೆ ಹರಿಸುವರಿವರೆ ನರ ನೀನಂಬದೆ2
ಮದಡ ಜನರಿಗೆಲ್ಲ ಪದಸುಳಾದಿಗಳನು |
ಚತುರತನದಲಿಂದ | ವಿಧ ವಿಧ ವಿವರಿಸಿ | ಸದಮಲ
ಸುಜ್ಞಾನ | ವದಗಿಸುವಂಥ ಈ ಬುಧರುಪದೇಶ
ಮುದದಿ ಪಡೆಯದೆ 3
ಆಶೆ ಕ್ರೋಧಂಗಳ ಜಯಿಸುತ ಮನದಿಂದ ಕ್ಲೇಶಮೋದ
ಸಮ ತಿಳಿದಿಹರೋ | ಯೇಸೇಸು ಕಾಲಕ್ಕೆ ಭೂಸುರೋತ್ತಮ
ರಾದ | ಈ ಸುಗುಣರ ಸಹವಾಸ ದೊರೆವುದೆ 4
ಶ್ರೀ ಮುಖವಾಣಿಯು ಸಾಮಾನ್ಯವಲ್ಲವೋ
ನೇಮದಿಂ ಕೇಳ್ವರ | ಶಾಮಸುಂದರ ಸುಧಾಮನಿಗೊಲಿದಂತೆ |
ಪ್ರೇಮದಿಂ ಸಲಹುವ ನೀ ಮನದಲಿ ತಿಳಿ 5