(ಕಾಂಚಿ ವರದರಾಜಸ್ವಾಮಿ)
ಕಾಂಚಿ ವರದರಾಜ ಪರಮ ದಯಾಳೊ
ವಂಚನೆಯಿಲ್ಲದ ಬಿನ್ನಹ ಕೇಳೊ ಪ.
ಐಂದ್ರ ನಕ್ಷತ್ರ ವಾಗೀಂದು ವಾರದಲಿ ದಿ-
ನೇಂದ್ರನುದಯಲಗ್ನ ಸಲುವ ಸಮಯದಿ
ಇಂದ್ರಾದಿ ದಿವಿಜರು ಪೊಗಳಲು ನಭದಿ
ರಾಜೇಂದ್ರ ನೀ ಪೊರಮುಟ್ಟುದನು ಕಂಡೆ ಮುದದಿ 1
ಭರದಿಂದ ಧ್ವನಿಗೈವ ಭೇರ್ಯಾದಿ ವಾದ್ಯ
ತಿ¾ುವಾಯ್ಮೊ¾õÉÉಯೆಂಬ ದ್ರಾವಿಡ ಪದ್ಯ
ನೆರೆದ ವಿಪ್ರರು ಪೇಳ್ವ ವೇದ ಸಂವೇದ್ಯ
ನಿರವದ್ಯ 2
ಎರಡು ಸಾಲಿನಲಿ ಸಾವಿರ ಸಂಖ್ಯೆ ದೀಪ
ಮೆರೆವ ಭೂಛತ್ರಿ ಪಿಡಿದಿರುವ ಪ್ರತಾಪ
ಗರುಡ ಗಮನನಾಗಿ ಗೋಪುರ ಮಧ್ಯ
ಬರುವ ನಿನ್ನನು ನೋಡಿದರೆ ಮುಕ್ತಿ ಸಿದ್ಧ 3
ಖಂಡ ಮಂಡಲ ನಾಯಕನ ಭೇಟಿ ದೊರೆಯೆ
ಖಂಡಿತವಾಗೋದು ದಾರಿದ್ರ್ಯ ಮರೆಯೆ
ವಾಹನ ಅಖಿಳಾಂಡಕೋಟಿ
ಬ್ರಹ್ಮಾಂಡನಾಯಕ ನಿನ್ನ ಕಂಡೆನು ದೊರೆಯೆ 4
ಶೇಷಗಿರಿಯೊಳಿದ್ದು ಪೋಷಿಪೆ ಜನರ
ದೋಷವಿದೂರ ಕಾಂಚೀಶ ಶ್ರೀವರದ
ಆಶೆ ಪೂರಿಸಿ ಎನ್ನ ಭಾಷೆಯ ಸಲಿಸೊ
ಶ್ರೀಶ ಕೃಪಾರಸ ಸೂಸೆನ್ನ ಶಿರದಿ 5