ಭಕ್ತಿಯು ಸುಲಭ ತಾನಲ್ಲ ನಿಜಭಕ್ತಿ ದೊರಕಲವಗಾಗುವುದು ಎಲ್ಲ ಪ
ಎಲ್ಲ ಸಂಗವ ಬಿಡಬೇಕು ತಾನುಬಲ್ಲ ಗುರುವ ಸೇವೆ ಮಾಡಬೇಕುಎಲ್ಲಕೆ ತಾನಿರಬೇಕು ಭಕ್ತಿಬಲ್ಲವನಿಂದ ನಿತ್ಯದಿ ಹೆಚ್ಚಬೇಕು 1
ಹೇಳಿದಲ್ಲಿಗೆ ಹೋಗಬೇಕು ಮನಕೇಳದಿರಲು ಬುದ್ಧಿಯ ಹೇಳಬೇಕುಕಾಳರಾತ್ರೆಯೆನ್ನದಿರಬೇಕು ನಿತ್ಯಬಾಲಕನಂತೆ ತೋರುತಲಿರಬೇಕು 2
ಹಸಿವು ತೃಷೆಯ ಬಿಡಬೇಕು ತಾನುಎಸಗಿ ಗುರುಸೇವೆ ಮಾಡಬೇಕುಬಿಸಿಲು ಮಳೆ ಎನ್ನದಿರಬೇಕು ಧೈರ್ಯವೆಸಗಿ ಭಯಕೆ ಬೆಚ್ಚದಲಿರಬೇಕು 3
ಗುರುವಿನನಡೆ ನೋಡಬೇಕು ಆಗುರುವಿನ ನಡೆಯ ಕಂಡಂತಿರಬೇಕುಕರಣ ವಿಷಯ ಹೋಗಬೇಕು ನಿತ್ಯಭರಿತವಾನಂದವಾಗಿರಬೇಕು 4
ಕರವ ನೀಡುವನು ಏ-ನೆಂತು ಪೇಳಲಿ ತನ್ನೊಳೆರಕ ಮಾಡುವನು 5