ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ನಿರ್ದಯನಾದ್ಯೋ ಎಲೆ ದೇವನೆ ಕಂತುಪಿತ ನಿನ್ನ ಅಂತ:ಕರುಣ ಎನ್ನ ಮೇಲೆ ಇಲ್ಲದೆ ಪ ಅಂತರಂಗದಿ ಮನದಿ ಅನುದಿನವು ಬಿಡದೆ ನಿಮ್ಮಾ ಚಿಂತನೆಯ ಮಾಡಿದರೆ ಚಿತ್ತಕರಗದೇಕೆ ಅಂಥ ಮಹಾದೋಷ ದತಿಶಯನಗೇನುಂಟ- ನಂತಗುಣ ಪರಿಪೂರ್ಣ ಆದಿನಾರಾಯಣ 1 ವಾಸುದೇವನೆ ನಿಮ್ಮ ವರ್ಣಿಸುವೆನು ವಸುಧಿಯೊಳು ಭೂಸುರರ ಪೋಷಿಸುವ ಪುಣ್ಯಪುರುಷಾ ಘಾಸಿಗೊಳಗಾಗಿ ನಿಮ್ಮ ಧ್ಯಾಸವೇಗತಿಯೆಂದು ಏಸೋ ಪರಿಯಲಿ ಭಜಿಸಿ ಈಶ ನಿನ್ನ ಕೃಪೆಯಾಗದೂ 2 ಸಕಲಲೋಕಾಧೀಶ ಸಕಲಭಾರಕರ್ತನಾಗಿ ಪ್ರಕಟ ಭಕುತರೊಳಗೆ ಪಾಲಿಸದೆ ಎನ್ನಾ ಮುಕುತಿದಾಯಕ ಹೆನ್ನ ವಿಠ್ಠಲ ನೀನೆ ಗೋವಿಂದ ಅಕಲಂಕ ಮಹಿಮ ನಿನ್ಹರುಷವನು ತೋರದಿನ್ನಾ 3
--------------
ಹೆನ್ನೆರಂಗದಾಸರು
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ
ಮಾಯಾದೊಳಗೆ ಶಿಲ್ಕಿ ಮಗ್ನನಾಗಿ ಮರವೆಗೆ ಒಳಗಾದೆ ಕಾಯಬೇಕಯ್ಯ ನಿನ್ನ ಕರುಣ ರಸವನ್ನು ಕಾಣದೆ ನಾ ಬರಿದೆ ಪ ದೀನದಯಾಪರ ದನುಜಾಂತಕ ನಿಧಾನ ಸುಜನವಂದ್ಯಾ ಮಾನವಾದಿ------ಜನಕ ಸನ್ಮಾನಿತ ಮುಚುಕುಂದ ನಿತ್ಯ ಶ್ರೀ ರಂಗಾ 1 ಇತರ ಜ್ಞಾನತೊರೆದು ಮನಬಣ್ಣ ಮರೆದು ಪಾದ ಸೌಖ್ಯವ ಕಾಣದಿನ್ನೂ ಪಿಡಿವರು ಇನ್ನೂ 2 ಏಸೋ ಬಾರಿ ನಾ ಹುಟ್ಟಿದರೇನು ಇನ್ನು ನಿನ್ನ ಕಾಣದೆ ಮನವು ನಿನ್ನಲ್ಲಿಲ್ಲದೆ ಘಾಸಿಗೆ ಬಿದ್ದೆನು ಕರುಣಿಸೊ ಬೇಗನೆ ಘನ್ನ `ಹೆನ್ನ ವಿಠ್ಠಲನೆ ' ವಾಸುದೇವ ಎನ್ನ ವೈನದಿ ರಕ್ಷಿಸೋ ವಸುಧೆಯ ಪಾಲಕ 3
--------------
ಹೆನ್ನೆರಂಗದಾಸರು
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು
ರಂಗಕೇಳಯ್ಯ ಬೆಳಂದಿಗಳ ಬೆಳಗುವ ವಸ್ತ್ರಕಂಗಳಿಗೆ ಸೂರ್ಯ ಹೊಳೆವಂತೆಶ್ರೀರಂಗ ಕೊಳ್ಳಯ್ಯ ಉಡುಗೊರೆ ಪ.ಏಸೋ ಮಾಣಿಕದ್ವಸ್ತ ಹಸಿರುಪಟ್ಟಾವಳಿವಸುದೇವಗೀಗ ರಥ ತೇಜಿ ಕೊಟ್ಟ 1ಲೆಕ್ಕವಿಲ್ಲದೆ ರತ್ನ ಸಂಖ್ಯವಿಲ್ಲದೆ ವಸ್ತ್ರದೇವಕಿಗೆ ಕೊಟ್ಟಪಟ್ಟಾವಳಿ2ಹಲವು ಮಾಣಿಕದ ವಸ್ತ ಬೆಲೆಯಿಲ್ಲದಷ್ಟು ವಸ್ತ್ರಬಲರಾಮಗೆ ಕೊಟ್ಟ ರಥಗಳ 3ಮುತ್ತು ಮಾಣಿಕದೊಸ್ತ ಮತ್ತೆಪಟ್ಟಾವಳಿಸೀರೆಮಿತ್ರೆ ರೇವತಿಗೆ ದೊರೆ ಕೊಟ್ಟ 4ಸಂಭ್ರಮದಿಭಾನುಮಾನುಸಾಂಬಪ್ರದ್ಯುಮ್ನಗೆಮೇಲೆಂಬೊ ವಸ್ತ್ರಗಳುಪಟ್ಟಾವಳಿಕೊಟ್ಟ5ಸರಸಿಜಾಸನ ಶಿವನ ಅರಸೆಯರಿಗೆ ಮೊದಲಾಗಿಸರಸದೊಸ್ತಗಳು ರಥಕೊಟ್ಟ 6ಇಂದ್ರ ಚಂದ್ರನ ಮಡದಿಯರಿಗೆಬಂದ ಋಷಿಗಳಿಗೆಲ್ಲಚಂದ-ದೆÉೂಸ್ತ್ರಗಳ ದೊರೆ ಕೊಟ್ಟ 7ಪಂಡಿತರು ರಾಯರಿಗೆ ದುಂಡು ಮುತ್ತಿನ ವಸ್ತತಂಡ ತಂಡದಲಿಜವಳಿಯ ದೊರೆ ಕೊಟ್ಟ 8ದಾಸರುದಾಸಿಯರಿಗೆ ಸೋಸಿನ ವಸ್ತ್ರಗಳು ಸೀರೆಕುಪ್ಪಸ ಜರತಾರಿಗಳ ದೊರೆ ಕೊಟ್ಟ 9ಗುಜ್ಜಿಯರ ಮಕ್ಕಳಿಗೆ ಗೆಜ್ಜೆ ಸರಪಳಿ ಅಂಗಿಸಜ್ಜು ತೋರುವ ಅರ¼ಲೆ ಕೊಟ್ಟ 10ಗೊಲ್ಲನಾರಿಯರ ಕುಬ್ಜಿಗೆಲ್ಲ ರಾಮೇಶ ಕೊಟ್ಟಚಲುವ ನಮ್ಮ ಮ್ಯಾಲೆ ಹರುಷಾಗೊ 11
--------------
ಗಲಗಲಿಅವ್ವನವರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು