ಭೂವರಾಹ ವಿಠಲನೆ | ಸೇವಕನ ಪೊರೆಯೊ ಪ
ಕಾವಕರುಣಿಗಳರಸ | ಭಾವಜಾನಯ್ಯ ಅ.ಪ.
ಏಸೆಸೊ ಜನ್ಮಗಳ | ಸೂಸಿದನುಭವದಿಂದಲೇಸಾದ ಮಧ್ವಮತ | ಪೋಷಿಸುತ್ತಿಹನೊವಾಸವಾದ್ಯಮರನುತ | ಶೇಷಾದ್ರಿವಾಸಹರಿಪೋಷಿಸೊ ಬಿಡದಿವನ | ಆಶೆಪೂರಯಿಸಿ 1
ತಾರತಮ್ಯಜ್ಞಾನ | ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಕಾರಣಾತ್ಮಕನೆಸಾರತಮ ನೀನೆಂಬ | ಚಾರುಮತಿಯನೆ ಕೊಟ್ಟುನೀರಜಾಸನ ವಂದ್ಯ | ಪಾರುಗೈಭವವ 2
ಅಧ್ಯಾತ್ಮ ಅಧಿಭೂತ | ಆದಿಭೌತಿಕತಾಪಭೋದಿಸುತ ಸಾಧನದ | ಹಾದಿಯಲ್ಲಿರಿಸೋಮಧ್ವಾಂತರಾತ್ಮಕನ | ಪಾದರತಿಯಲಿ ಶ್ರದ್ಧೆಉದ್ಧರಿಸು ಇವನಲ್ಲಿ | ಹದ್ದುವಾಹನನೇ 3
ಕಂಸಾರಿ ಪೊರೆಯೊಹಂಸ ವಾಹನನಾದಿ | ತೃಣಾಂತ ಚವರನಹಂಸರೂಪಿಹರಿಯ | ಆಧೀನ ತಿಳಿಸೋ 4
ಸರ್ವತ್ರ ವಾಪ್ತನಿಹ | ಸರ್ವ ದೋಷ ವಿದೂರಸರ್ವಂತಾರಾತ್ಮಕನೆ | ಸರ್ವೋತ್ತಮಸರ್ವಧಾತನ ಸ್ಮøತಿಯ | ದರ್ವಿ ಜೀವಿಗೆಯಿತ್ತುಪೊರೆಯೊ ಸುಂದರ ಗುರು | ಗೋವಿಂದ ವಿಠಲ5