ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸುಪರಿ ಈಸಬೇಕೋ ಶ್ರೀಶದಾಸನೇ ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ1 ಎನಿತೆಂದು ಹೇಳಲ್ಯ ನಿನಗೆ ಮನದಳಲು ನೀಗಲಸದಳವಾಗಿ ಬಳಲುವೆನು ತನುವಿನೀ ಸಂಕಟವ ತೊಲಗಿಸೈ ಜವದಿ 2 ದುರಿತ ದೂರಪುದು ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ ಭವ ಕಿಚ್ಚಿನಿಂದುದ್ಧರಿಸಿ ಎನ್ನನು ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ 3
--------------
ನರಸಿಂಹವಿಠಲರು
ಕರವ ಪಿಡಿಯೋ |ಮಾ ಕಮಲಭವ ವಂದ್ಯ | ಭಕ್ತರುದ್ಧರಿಸೋ ಪ ನಿನ್ನ ನಾಮಾಮೃತವು ಜಿಂಹ್ವೆಗೆಪೊದಗಲೀ |ನಿನ್ನ ಕಥಾಶ್ರವಣ ಕಿವಿಗಾಗಲೀ ||ನಿನ್ನ ಚಾರಿತ್ರಗಳ ನಿರುತಕೊಂಡಾಡಲಿ |ನಿನ್ನ ದಾಸರು ಕೇಳಿ ಶಿರದೊಗಲೀ 1 ಪಂಚಭೇದ ಜ್ಞಾನವೇ ತಿಳಿಯಲಿ |ಮಾರುತಾ ಮತವನ್ನು ಅನುಸರಿಸಲಿ ||ಆರೆರಡು ನಾಮ ಊಧ್ರ್ವಪುಂಡ್ರವನೆ ಧರಿಸಲಿ |ಧೀರ ಗುರು ಮಧ್ವರಾಯರೇ ಮುಖ್ಯರೆನಲಿ 2 ಏಸುಪರಿ ತುತಿಸಿ ವಾಣೀಶಗಸದಳವೋ ಶ್ರೀ |ವಾಸುದೇವನನು ತುತಿಸಲೊಶವೇ |ಶ್ರೀಶ ಪ್ರಾಣೇಶ ವಿಠ್ಠಲರಾಯ ದಯದಿನ್ನು |ದಾಸರ ದಾಸನೆಂದೆನಿಸಿ ಪೊರಿಯೊ 3
--------------
ಶ್ರೀಶಪ್ರಾಣೇಶವಿಠಲರು
ಪರಿ ನೆಲಸಿದೀ ಏ ಸ್ವಾಮಿ ಪರಿ ನೆಲಸೀದಿ ಏಸುಪರಿ ನೆಲಸೀದಿ ದಾಸಜನ ಹೃದಯದಿ ಭೂಸ್ವರ್ಗ ಪಾತಾಳ ಬ್ಯಾಸರ ಮಾಡಿದಿ ಪ ಎಸೆವ ಚಂಚಲ ಶಿರಿಯು ತವರ್ಕಣ್ ಮಸಕು ಮಾಡಿದಳೇನೋ ಬಿಸಜಸಂಭವ ವೇದಪಠಣದಿ ಕುಶಲ ನುಡಿಯನೇನೋ ಅಸ್ವಧಿಪ ಪ್ರಾಣ ಸೊಸಿಯ ವಾಣಿಯು ಸ್ವಸುತೆ ಭಾರತೀ ಉಸುರಿಬಿಟ್ಟಳೇನೋ 1 ಮುಪ್ಪೊಳಲುರಿಗಾನು ಪೌತ್ರನು ವೊಪ್ಪುವ ಮೈಗಣ್ಣಾ ತಪ್ಪದೆ ಸೇವಿಸುವ ಸುಮನಸರಪ್ಪಣಿತ್ತರೇನೋ ತಪ್ಪದಾಸರನ ಮುಗಿಪ್ಪ ಗರುಡ ಶೇಷ- ರೊಪ್ಪಿಗಿಯಿಲ್ಲದೆ ತಪ್ಪಿಸ್ಯೋಡಿ ಬಂದ್ಯಾ 2 ಸುರಲೋಕವಾಸಾವು ಶ್ರೀಹರೆ ಪರಮಸೌಖ್ಯವಲ್ಲೆ ಸುರತರುಧೇನುಗಳು ನಿನಗೆ ತಾವ್ ಕೊರತೆ ಮಾಡಿದವೇನೋ ಸುರಮುನಿಗಂಧರ್ವರ ಗಾಯನ ಬಿಟ್ಟು ಸರಸವೇನು ಕಂಡಿ ನರಸಿಂಹವಿಠಲ3
--------------
ನರಸಿಂಹವಿಠಲರು