ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು