ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಏಳೆನುತ ಭಾನು ಬರುತಿಹ |ಹೇಳುವರ್ಯಾರಿಲ್ಲ ನಿಮಗೆ ಜ್ಞಾನವ ಪ ಇರುಳೆಲ್ಲ ನೀವಿನ್ನು ವಿಷಯಕೆ ಮರುಳಾಗಿ |ಹರಟಿಯೊಳಗೆ ಸೊರಗುತಿಹರೀ ||ತರಳಾಕ್ಷಿಯರ ಅಂಗಸಂಗಕೆ ಬೆಂಡಾಗಿ |ಬರದ ಆಯುಷ್ಯ ಬರಿದೇ ಕಳೆವಿರೀ 1 ಮಾಡಲಿಲ್ಲವು ಧ್ಯಾನ ಯೋಗ ಜಪ ತಪ |ನೀಡಲಿಲ್ಲವು ದಾನ ಧರ್ಮವ ||ನೋಡಲಿಲ್ಲವು ಸಾಧುಸಂತರ ನಡತೆಯ |ಕೇಡ ಬಂದಿತು ಮುಂದೆ ನೋಡಲು 2 ತಂದೆ ಭವತಾರಕನೆ ಹಿಂದಾದುದಾಗಲಿ |ಮುಂದಾರ ನೀವಿನ್ನು ಒಂದು ನಿಮಿಷವು |ಗೊಂದಲ ಬಿಟ್ಟು ಅರಿತು ಕೊಂಡು | ಹೊಂದಿರಿ ಪೂರ್ಣ ಆನಂದವನೆಂದು 3
--------------
ಭಾವತರಕರು