ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು