ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ