ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ಹರಿಯೆನ್ನ ಕೂಡಿಸೊ ಬಿಡದಿನ್ನು ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ ಹೃದಯದಲಿ ಅನುಗಾಲ ಉಚಿತನಾಗಿ ಪದುಮನಾಭ ನಿಮ್ಮ ಪಾದವನೆ ಪೂಜಿಸುವ ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ 1 ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ ಅತ್ಯಂತ ಪುರುಷ ಆನಂದದಲ್ಲಿ ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ 2 ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ ದಿನಗಳನು ಕಳೆವಂಥಾ ದ್ವಿಜೋತ್ತಮರಾ ಅನುಸರಿಸಿ ಅವರನನು ಅತಿಮೋದದಿಂದ ಬೆರೆದು ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ 3 ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ ಬೋಧಗುರು ಕರುಣದಲಿ ಪೂರ್ಣರಾಗಿ ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ 4 ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ ತಪಗಳನೆ ಮಾಡುವಂಥ ಧನ್ಯಜನರಾ ಸುಫಲಂಗಳನೆ ಪಡೆದು ಸೂತುತಲಿ ಇರುವರಾ ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ 5 ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ ಪರಿಪರಿಯಲಿರುವಂಥ ಭಾವಜ್ಞರಾ- ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ ಪರಮ ಭಕ್ತರಾದ ಪುಣ್ಯವಂತರ ಸಂಗ 6 ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ ಅಂಗಾದಿ ದೋಷವ ಕಳೆದ ಅಧಿಕ ಜನರಾ ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ' ಹೊನ್ನ ವಿಠ್ಠಲ’ ರಾಯ ಗೋವಿಂದ 7
--------------
ಹೆನ್ನೆರಂಗದಾಸರು
ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ | ಪಾಲಿಸುವ ಮೂಲೋಕ ಪರಮಾತ್ಮನಾ ಪ ಮೂರೊಂದು ಪದರದ ಚೀಲದೊಳು ಥಳಥಳಸಿ ದೋರುತಿಹ ರತ್ನ ಪರಿಚಿದ್ರೂಪನಾ | ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ | ಧೀರಯೋಗಿಯ ಕಂಗಳಾನಂದನ 1 ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ | ಸಾರ ವೃಕ್ಷವ ತ್ರಿಗುಣಮಯದಿಂದಲಿ || ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ | ತೋರಿ ತೋರದಲಿಪ್ಪ ನಿರ್ಲಿಪ್ತನಾ2 ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ | ಆಡಿಸುವ ಕರಚರಣ ನುಡಿನುಡಿಸುವ | ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ | ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು