ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲನುತ ಶ್ರೀಶೈಲಮಂದಿರ ಮಲ್ಲಿಕಾರ್ಜುನ ರಕ್ಷಿಸು ಪ ಏಳುಕೊಳ್ಳಗಳೇಳು ನೆಲೆಗಳ ಮೇಲೆ ತೋರ್ಪ ಲಿಂಗನೆ ಕಾಲಕಾಲದಿ ಬಾಲನೆಂದೆನ್ನ ಮಲ್ಲಿಕಾರ್ಜುನ ರಕ್ಷಿಸು 1 ಶೀಲ ಭಕುತರ ಪಾಲಿಸಲು ಪಾತಾಳಗಂಗೆಯ ನಿರ್ಮಿಸಿ ಪಾಲಿಸಿದಿ ಬುವಿ ಪಾಲಿಸಿ ವರ ಮಲ್ಲಿಕಾರ್ಜುನ ರಕ್ಷಿಸು 2 ಸಾರಸೌಖ್ಯ ನೀಡುದ್ಧಾರ ಮಾಡಿದ ಮಲ್ಲಿಕಾರ್ಜುನ ರಕ್ಷಿಸು 3 ಅಂಗಜಹರ ಗಂಗಾಧರ ಗುರುಲಿಂಗಜಂಗಮಾತ್ಮಕ ಭವ ಮಲ್ಲಿಕಾರ್ಜುನ ರಕ್ಷಿಸು 4 ಕಾಲಕಾಲ ಕಾಲಕೇಶ್ವರ ಶೂಲಪಾಣಿಯೆ ನಂಬಿದೆ ಕಾಲನ ಮಹದಾಳಿ ಗೆಲಿಸೆನ್ನ ಮಲ್ಲಿಕಾರ್ಜುನ ರಕ್ಷಿಸು 5 ಕಳೆದೆ ದಿನಗಳ ಇಳೆಯ ಸುಖಮೆಚ್ಚಿ ತಿಳಿಯದೆ ತವಮಹಿಮೆಯ ಒಲಿದು ಕ್ಷಮಿಸೆನ್ನ ಬಾಲನೆಂದೆತ್ತಿ ಮಲ್ಲಿಕಾರ್ಜುನ ರಕ್ಷಿಸು 6 ಅಷ್ಟವರ್ಣ ವಿಶಿಷ್ಟಭಕ್ತಿಯ ಕೊಟ್ಟು ಕುರಣಾದೃಷ್ಟಿಯಿಂ ಅನುದಿನ ಮಲ್ಲಿಕಾರ್ಜುನ ರಕ್ಷಿಸು 7 ದುಷ್ಟಭವಕಿನ್ನು ಹುಟ್ಟಿಬರುವಂಥ ಕೆಟ್ಟ ಬವಣೆಯ ತಪ್ಪಿಸು ಇಷ್ಟದಾಯಕ ಮುಟ್ಟಿಪೂಜಿಪೆ ಮಲ್ಲಿಕಾರ್ಜುನ ರಕ್ಷಿಸು 8 ಪರಕೆ ಪರತರ ಪರಮಪ್ರಕಾಶ ವರದ ಶ್ರೀರಾಮಮಿತ್ರನೆ ಮರೆಯ ಬಿದ್ದೆನು ಕರುಣಿಸಿ ಮುಕ್ತಿ ಮಲ್ಲಿಕಾರ್ಜುನ ರಕ್ಷಿಸು 9
--------------
ರಾಮದಾಸರು