ನೋಡುವ ಬನ್ನಿ ಮುರಳೀಧರನ್ನ ಪ
ಪಾಡುತ ಕುಣಿ ಕುಣಿದಾಡಿ ಕೊಂಡಾಡುತ ಅ.ಪ
ಮನೆಕೆಲಸಗಳಿಗೆ ಕೊನೆ ಮೊದಲಿಲ್ಲವು
ನೆನೆದರೆ ಬೇಸರ ಮನೆಗಳಂತಿರಲಿ 1
ಪತಿಗಳ ಸೇವೆ ಶ್ರೀಪತಿಯನೆ ಒಲಿಸಲು
ಅತಿ ಸುಲಭದಲಿರೆ ಪತಿಗಳಂತರಲಿ 2
ಬಾಲೆಯರಾದರೆ ಲಾಲಿಸುವನು ಬಲು
ಏಳಿರೇ ಎಮ್ಮಯ ಬಾಲರಂತಿರಲಿ 3
ಪರಪುರುಷನ ಕೂಡಿ ದುರಿತಗಳೆಲ್ಲವ
ತೊರೆಯುತ ಮೈಗಳ ಮರೆಯುವ ಮುದದಿ 4
ಬಂಧುಗಳೆಂದೆಮ್ಮ ಬಂಧನ ಸಾಕಮ್ಮ
ಚಂದದಿ ಪ್ರಸನ್ನ ನಂದಕುಮಾರನ 5