ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ನೀನುಪಕಾರ ಅಪಾರ ಮಾಡಿದೆ ಕಾವ ಕರುಣಾ ಸ್ವಭಾವ ಕೇಳು ಪೇಳುವೆ ಪ ನವಯುವತಿ ಶಿಲೆ ಕೊರಳಿಗೆ ಕಟ್ಟಿಕೊಂಡು ಭವ ಸಾಗರದೊಳು ಮುಳುಗಿ ಪೋಗುವ ನಾ ಅವಸರಕೊದಗಿ ಪಿಡಿದು ದಡ ಸೇರಿಸಿ ದವನಾಗಿ ಎಚ್ಚರಿಕೆ ತಂದಿತ್ತೆ ದಯಾಳೊ 1 ಭಾರ ತಾಳದು ಎಂದು ಸೂತ್ರವೂ ಶಿಖಿಯೊ ನಿ ವಾರಿಸಿ ತನುವಿಗೆ ಲಘುವು ಮಾಡಿದೇಯೆ ಭಾರಮಯತಾ ರಜ್ಜು ಮನಕೆ ಸುತ್ತಿದೆ ಆಶಾಂ- ಕುರ ಕೇಶಗಳು ಬೆಳದಿವೆ ಪರಿಹರಿಸು 2 ಲಕ್ಷ್ಯವಿಲ್ಲದೆ ಅನ್ನ ಮೊದಲಾಗಿ ಕೊಡುವಂಗೆ ಶಿಕ್ಷಿಸಿ ಗರ್ವವು ಕಳೆದು ಈಗ ಭಿಕ್ಷುಕನ ಮಾಡಿದೆ ನಿನ್ನದೆ ಬೇಡುವೆ ಲಕ್ಷ್ಮೀಪತಿಯೆ ಅಂತರಂಗದ ಗೃಹಸ್ಥ 3 ಏಳು ಮನೆಗಳನ್ನು ಕೇಳೋದು ಯತಿಧರ್ಮ ಏಳಲಾರಿನೊ ವೃದ್ಧ ಕೇಳಲಾರೆ ಕೇಳುವೆ ನಿನ್ನನೇ ಏಳು ಭಿಕ್ಷವ ನೀಡು ಬಾಳುವೆ ಬಹುಕಾಲ ನಿನ್ನ ಕೊಂಡಾಡುತ 4 ಶ್ರೋತ್ರಕ್ಕೆ ನಿನ್ನ ಕಥೆ ನಾಸಕೆ ನಿನ್ನ ಗಂಧ ನೇತ್ರಕ್ಕೆ ನಿನ್ನ ರೂಪ ರಸನಿಗೆ ನಾಮಾಮೃತ ಗಾತ್ರಕ್ಕೆ ನಿನ್ನ ಪಾದಸ್ಪರುಷ ಮನೋಬುದ್ಧಿ ಮಾತ್ರಕ್ಕೆ ಗುಣಕರ್ಮ ಕೊಡು ವಾಸುದೇವವಿಠಲ5
--------------
ವ್ಯಾಸತತ್ವಜ್ಞದಾಸರು