ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಪ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ 1 ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು 2 ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ 3
--------------
ವಿಜಯದಾಸ
ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆÀಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ1 ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ 2 ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ || ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ | ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ3 ಆಳುವ ದೊರೆಯ ಸಮ್ಮುಖದಲಿ ಬಂಟನಿರೆ | ಖೂಳರು ಬಂದು ಶಸ್ತ್ರವನು ತೆಗೆದು || ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ ಏಳಲವು ಅರಸಗಲ್ಲದೆ ಬಂಟನಿಗೇನು 4 ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ | ಅತ್ಯಂತ ಪಾಲಸಾಗರ-ಸದನನೆ || ಭೃತ್ಯರಪಮಾನ ಅಭಿಮಾನ ನಿನ್ನದು ಸದಾ | ಸಿರಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಸಿರಿ ಸರಸ್ವತಿಯೇ ಪ ಏಳಲವ ಮಾಡದಲೆ | ಭಕುತಿ ಭಿಕ್ಷೆಯ ನೀಡೇ ಅ.ಪ. ಹೃದಯ ಬರಿದಾಗಿಹುದು | ಮಧುಮಥನಸೂನಾಮಸುಧೆಯನುಣಿಸುತ ದಿವ್ಯ | ಯದುವರನ ರೂಪಾ |ಸದಯದಲಿ ನಿಲ್ಲಿಸುವುದು | ಹೃದಯ ಗಹ್ವರದಲ್ಲಿವಿಧಿ ಸತಿಯೆ ಹರಿಸುತೆಯೆ | ಬುಧಜನಾನತೆಯೆ 1 ಪಾದ ಭವ ಉತ್ತರಿಸುಮಾರಾರಿ ವಂದಿತಳೆ | ಚಾರುತರ ಗಾತ್ರೇ 2 ಅರಸಿ ನೋಡಲು ನಿನಗೆ | ಸರಿಯುಂಟೆ ಭುವನ ಮೂ-ರರ ವಳಗೆ ಗುಣಶ್ರೇಣಿ | ವರ ನೀಲವೇಣೀ |ಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನ |ಪರಿಪರಿಯ ಚರಿತೆಗಳ | ಸ್ಫುರಿಸುವುದು ಸತತಾ 3
--------------
ಗುರುಗೋವಿಂದವಿಠಲರು
ಏಳಲವ ಮಾಡಿದಿರಿ ಏನ ಕೊಟ್ಟರು ಬೇಡಕಾಲಮನುಜರ ಸಂಗ ಸಾವಿರ ಕೊಟ್ಟರು ಬೇಡಪ.ಆದಿ ತಪ್ಪುವನವನ ಆಶೆಮಾಡಲು ಬೇಡಕೂಡಿ ನಡಿಯುವಲ್ಲಿಕಪಟ ಬೇಡಮೂಢ ಹೆಣ್ಣಿನ ಸಂಘ ಮಮತೆ ಇದ್ದರೂ ಬೇಡಮಾಡಿದಪುಕಾರವನ್ನು ಮರೆಯಬೇಡ 1ಬಂಧುವರ್ಗದಿ ಬಲುನಿಂದು ವಾದಿಸಬೇಡಮಂದಮತಿಯ ಕೂಡಾ ಮಾತು ಬೇಡಬರದ ತಿಥಿಗಳಲಿ ಬರಿದೆ ಕೋಪಿಸಬೇಡಇಂದಿರೇಶನ ಮರೆದು ಜಡವಾಗಬೇಡ 2ಹವಣರಿಯದೆ ಹಗೆಗಳ ಹತ್ತಿರಗೆಯಬೇಡಜವನ ಭೂಮಿಯಲಿದ್ದು ಜೊತೆ ಬೇಡಭುವನೀಶ ಪುರಂದರವಿಠಲನ ನೆನೆಯದೆಅವಮತಿಯಾಗಿ ನೀ ಕೆಡಲುಬೇಡ 3
--------------
ಪುರಂದರದಾಸರು