ಓದಲೇಕೋ ಬರಿದೆ ಓದಲ್ಯಾಕೋ ಪ
ಆದಿ ಮಧ್ಯ ಅಂತ್ಯವೆಂಬೊ
ನಾದಬಿಂದು ಕಳೆಯನು ಅರಿಯದೆ ಅ.ಪ
ಏಳಬೇಕೋ ನಾರಿಯಾಳಬೇಕೋ
ಏಳು ಎಂಟು ಆತ್ಮವಿಚಾರ
ತಾಳಿ ತತ್ವ ಜ್ಞಾನವನ್ನು
ನೀಲಜ್ಯೋತಿಯನ್ನು ಕಾಣದೆ
ಜಾಲಾಮಾನಿನಿಯರೊಳು ಬೆರೆದೂ 1
ಓದಬೇಕೋ ಓದದ್ದೋದಬೇಕೊ
ಓದಿತಾವೊಂದಕ್ಷರವನ್ನು
ಪಾದಸೇವೆಯನ್ನು ಕೊಟ್ಟಾ
ಭೋಧಾಚಾರ್ಯನೆಂಬೊ ತುಲಸೀ
ಆದಿಪ್ರಣವವನ್ನು ಬಿಟ್ಟುವೋದಲೇಕೊ 2