ಹೊಂದಿ ಬದುಕಿರ್ಯೋ ಪ
ಹೊಂದಿ ಬದುಕಿರ್ಯೋ ಒಂದು ಮನದಲಿ |
ಮಂದ ಹಾಸ ಮುಕುಂದನಾ |
ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ 1
ಕುರುಳ ಗೂದಲು ಸರಳ ಗೊರಳವ |
ಗರಳಧರನುತ ಚರಣನಾ |
ಸಾರ ಸಂಹರಣನಾ |
ತರಳ ಗೊಲಿದ ಕರುಣನಾ 2
ಮರುಳು ಸುಯೋಧನ ಇರಲು ಏಳದೇ |
ಉರುಳು ಗೆಡಹಿದ ವೀರನಾ |
ಅರಳ ಪೂವಿನ ಹಾರನಾ |
ಗರಳಧರ ಮದ ಹಾರನಾ 3
ಹಲ್ಲಿದರಿಗಳ ದಲ್ಲಣಾಗಿಹ |
ಪುಲ್ಲಲೋಚನ ರಂಗನಾ |
ಮಲ್ಲ ಚಾಣೂರ ಭಂಗನಾ |
ಸಲ್ಲಲಿತ ಚಲ್ವಾಂಗನಾ 4
ಸಥಿಯ ನಡೆಸುವ ಇಂಗಿತರ ಮಹಿ |
ಪತಿಯ ನಂದನ ಜೀವನಾ |
ಸತತ ಭಕ್ತರ ಕಾವನಾ |
ಪತಿತ ಪಾವನ ದೇವನಾ 5