ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1 ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2 ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3
--------------
ಚಿದಾನಂದ ಅವಧೂತರು