ಕಂಡೆನು ಗುರುರಾಯಾ ನಿನ್ನುದ್ದಂಡ ಪರಾಕ್ರಮವಾ
ಕಂಡೆನಾ ಮನಗಾಡೆ ಪಾಂಡುಪಕ್ಷನ ಭೃತ್ಯ
ಹಿಂಡು ಖಂಡಿಸಿದ್ಯೋ ಪ
ರಾಮನ ಸೇವೆಗೆಂದೂ ನೀನು ಕಾಮಿಸಿ ಜನಿಸಿದೆಯೋ
ನೇಮದಿಂದಲಿ ಸುರಸ್ತೋಮವ ನೀಗಿ
ಭೂಮಿಜೆಯ ತಂದು ರಾಮನಿಗೊಪ್ಪಿಸಿದ್ಯೋ 1
ಗೋವಳ ಭೃತ್ಯನಾಗಿ ನೀನು ಅವರಲ್ಲಿ ಪುಟ್ಟಿದ್ಯೋ
ಸಾವಿನ ಬಾಯಿಗೆ ಕುರುವಿಂಡು ಕಟ್ಟಿ ನೀ
ಭಾರ ಪೋಗಲಾಡಿಸಿದ್ಯೋ 2
ಹರಿಮತ ಏರುವುದಕೆ ನೀನೆ ಸರಿ
ಗುರುಮಧ್ವನೆನಿಸಿದೆಯೋ
ಏಕವಿಂಶತಿ ಮತ
ನರಸಿಂಹ ವಿಠಲನ ದಾಸನೆನಿಸಿದ್ಯೋ 3
ಗಂಧದ ಮರವೇನು ಗಂಧದ ಮರವೇ