ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1 ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2 ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅನ್ಯಾಯದ ಮಾತುಗಳಾಡದಿರಿ ನೀವುಹೆಣ್ಣುಗಳಿರ ಕೇಳಿಪುಣ್ಯವಂತರಾದ ಕಾರಣ ಕೃಷ್ಣನಕಣ್ಣಿಂದ ನೋಡಿದಿರಿ ಪ. ವಾರಿಜಭವಾದ್ಯರ[ಸೇರದಿರುವವ]ಸೇರೋನೆ ಸಣ್ಣವರಸೂರ್ಯನಂತೆ ತೇಜದವ ಬಂದು ನಿಶಿಯಲಿಸೂರಿಲಿ ನಿಂತಾನೇನೆ 1 ಕ್ಷೀರಸಾಗರಶಾಯಿ ಆಗಿದ್ದವನು ಪಾಲುಸೋರೆ ಕದ್ದದ್ದು ನಿಜವೆನಾರೇರೆಂದರೆ ಮನಕೆ ತಾರದ ಸ್ವರಮಣಪೋರೇರ ನೆರೆದಾನೇನೆ2 ಕಾಲಯವನನ ಕೂಡ ಕಲಹ ಕೊಟ್ಟವ ನಿಮ್ಮಬಾಲರ ಬಡಿವನೇನೆಮೂಲೋಕವನೆಲ್ಲ ಭಾರಹೊತ್ತ ಹರಿ ತಾನುಆಳುಗಳೇರುವನೇನೆ 3 ವಾಲಯದಿ ಸುರರಿಗೆ ಸುಧೆಯನಿತ್ತ ಗೋಪಾಲಮೊಲೆಯನುಂಬುವನೇನೆಪೇಳಲಿನ್ನೇನು ದನುಜಕುಲಾಂತಕÀ ಹರಿಮೂಲೆಯಲಡಗುವನೇನೆ 4 ಸುರರು ಸ್ತುತಿಸೆ ತುಟಿ ಮಿಸುÀದವ ತಾನು[ಬಿರು]ಮಾತನಾಡುವನೆಕರಿರಾಜ ಕ[ರೆ]ದರೆ ಓಡಿ ಬಂದವ ನೀವುಕರಿಯೆ ಬಾರದಿಪ್ಪನೆ 5 ಸ್ಥಿರವಾದ ವೈಕುಂಠದರ¸ನೆನಿಸುವ ಸ್ವಾಮಿಕೆರೆಭಾವಿ ತಿರುಗುವನೆಗರುಡವಾಹನನಾಗಿ ಮುರಹರ[ಕರುಗಳ]ಏರುವನೆ6 ಪುಣ್ಯ ಪ್ರೇರಿಸುವ ದೇವರ ದೇವನು ಪರ-ಹೆ[ಣ್ಣ]ನಪ್ಪಿಕೊಂಬನೆಉಣ್ಣಲಿತ್ತ ಎಡೆ ಒಲ್ಲ ನಿತ್ಯತೃಪ್ತಬೆಣ್ಣೆಯ ಮೆಲುವÀನೇನೆ7 ಕಣ್ಣಿಗೆ ಕಾಣದ ಚಿನ್ಮಯ ಸರ್ವದಾ ನಿ-ಮ್ಮನೆಯೊಳಿಪ್ಪನೇನೆಚೆನ್ನರ ಚೆಲುವ ಕಾಮನಪಿತ ನಿಮ್ಮನುಆಣಕಿಸಿ ಆಡುವನೆ 8 ಮೃದುವಾದ ಉರಗತಲ್ಪನು ಹಸಿಬಾಣಂತಿಯಅದಟ ಮಂಚದೊಳಿ[ಪ್ಪ]ನೆಎದೆಯಲಿ ಶ್ರೀವತ್ಸ ಘಮಘಮಿಸುವ ದೇವಮದಬೆಕ್ಕು ಒಯ್ದ್ದನೇನೆ 9 ಮದನಾರಿಗೆ ತಾನು ಅದ್ಭುತ ಮಾಡಿದವಇದು ಆತನ ಲೀಲೆಯೆಪದುಮಾಕ್ಷ ಸಿರಿಹಯವದನರಾಯನ ಭಜಿಸಿಮುದದಿಂದ ನೀವು ಬಾಳಿರೆ 10
--------------
ವಾದಿರಾಜ
ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1 ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2 ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ