ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಚಿತ್ತಾಭಿಮಾನಿ ನೀನು ಮತ್ತೆ ನಾ ಬಲಗೊಂಡು ದುಷ್ಟವಿಷಯಕ್ಕೆ ಎರಗುವÀ ಮನವನ್ನು ಅಚ್ಚುತನ ಚರಣದಲಿ ಇರಿಸುವೆ1 ಮನದಭಿಮಾನಿಯೆ ಇವನ ನಾ ಬಲಗೊಂಡು ದುರುಳ ವಿಷಯಕೆ ಎರಗುವ ಮನವನ್ನು ನರಹರಿಯ ಚರಣದಲಿ ಇರಿಸುವೆ 2 ಅಚ್ಚುತನೆ ನಾ ನಿನ್ನ ಹೆಚ್ಚು ಬೇಡೋದಿಲ್ಲ ಕಷ್ಟಕಾಲದಲ್ಲಿ ಹರಿಯೆಂಬ ಸ್ಮರಣೀಯೊ ರಕ್ಷಿಸೋ ಲಕ್ಷ್ಮೀರಮಣನೆ 3 ನರಹರಿಯೆ ನಾ ನಿನ್ನ ಹಿರಿದ ಬೇಡೋಳಲ್ಲ ಸರ್ವಕಾಲದಲಿ ಹರಿಯೆಂಬೋ ಸ್ಮರಣೀಯ ಕರುಣಿಸೋ ಲಕ್ಷ್ಮೀರಮಣನೆ 4 ಪಾಲ್ಗಂಜಿಯೆಂದರೆ ಅರಗಂಜಿಯಾಹೋದೆ ಲಕ್ಷ್ಮೀರಮಣಗೆ ಎಂಟುಗುಣಳುಂಟೆಂದರೆ ಮೇಲಿದ್ದ ಗುಣಗಳಡಗೋದೆ 5 ಪಂಚಕನ ದೇಹದಲಿ ನಿಂತೆರಡು ಪಕ್ಷಿಗಳು ಸಂತತ ದುಃಖಿ ಸುಖಿಯೊಬ್ಬ ಜೀವಗೆ ನಿಂತು ಸುಖ ದುಃಖ ಕೊಡುತಿತ್ತು 6 ಪಂಚಮೂರುತಿ ಹರಿಯ ಅಂತರಂಗದಿ ಇಟ್ಟು ಸಂತತ ಸ್ವಪ್ನ ಸುಷುಪ್ತಿ ಏರಿಸುವ ಪ್ರಾರ್ಥಿಸಿ ಪ್ರಾಜ್ಞರಿಗೆ ಸರಿಯೆಂಬೆ7 ಈ ಜಾಗ್ರದವಸ್ಥೆಯಲಿ ನಾನಾವಿಧ ಕರ್ಮಗಳ ಪ್ರೇರಿಸಿ ಸಕಲ ಶ್ರೀಕಾರ ಮಾಡುವೊ ಸ್ವಾಮಿ ಶ್ರೀಹರಿಗೆ ಶರಣೆಂಬೆ 8 ನಡೆವುದು ನಿನ್ನ ಯಾತ್ರೆ ನುಡಿವುದು ನಿನ್ನ ನಾಮಸ್ಮರಣೆ ಅಡಿಯಿಡೋದೆಲ್ಲ ಹರಿಯಾತ್ರೆ ಗುರುಪೂಜೆ ಸ್ಮರಣೇಯ ಪಾಲಿಸೋ ಲಕ್ಷ್ಮೀರಮಣನೆ 9 ವಿಷ್ಣುಭಕ್ತಿಯಿಲ್ಲದೋರ ಹತ್ತಿರ ನಾನಿರೆ ಎಚ್ಚರಿತು ಮಾಡೆ ಗೆಳೆತನವ ಅವರ ಕಂಡರೆ ನಾನು ಕಿಚ್ಚ ಕಂಡಂತೆ ಕೊಲ್ಲಿಸುವೆ 10 ಹರಿಭಕ್ತಿಯಿಲ್ಲದೋರ ಹತ್ತಿರಲಿ ನಾನಿರೆ ಅರೆಘಳಿಗೆ ಮಾಡಿ ಗೆಳೆತನವ ಅವರ ಕಂಡರೆ ತಾನು ಉರಿಯ ಕಂಡಂತೆ ತೊಲಗುವೆ 11 ಕಾಶೀಪಟ್ಟಣ ಶ್ರೀ ವಾಸುದೇವರು ಭೂಮಿ ಹರಿದಾಸರು ಕಟ್ಟಿಸಿದ ಸ್ಥಳದಲ್ಲಿ ಹರಿಯ ನಿಜದಾಸಗೆ ವಿಶ್ವನಾಥನೆಂತೆಂಬೊ ಪೆಸರುಂಟು 12 ಹರಿದಾಸರ ಒಳಗೆ ಪರಮ ವೈಷ್ಣವನ್ಯಾರೆ ಕಿರಿಯ ಕೆಂಜೆÉಡೆಯ ಮಕುಟನೆ ಅಜನ ಸುತನಾ ಶಿವನು ಹರಿದಾಸಕಾಣೆ ಹುಸಿಯಲ್ಲ13 ಗುಣಮಣಿಧಾಮಗೆ ಮಣಿದೊಮ್ಮೆ ಇಕ್ಕದೆ ಹಲವು ದೈವಗಳ ಭಜಿಸಿದ ಪಾಪಿ ನೀನು ಮಣಿಮಂತ ಹೋದಗತಿಗ್ಹೋಗ್ವೆ 14 ಎದ್ದು ತಮಸಿಗೆ ಉರುಳುವೊ ಪಾಪಿ ನೀ ಅದ್ವೈತ ಹ್ಯಾಗೆ ಬಿಡದ್ಹೋದಿ 15 ಅಳಿದ್ಹೋಗೊ ಶರೀರವನು ನರಹರಿಗೆ ಸರಿಯೆಂಬೆ ಬಿಡದೆ ತಮಸಿಗೆ ಉರುಳವೊ ಪಾಪಿ ನೀ ಚಲಹವನು ಹ್ಯಾಗೆ ಬಿಡದ್ಹೋದಿ 16 ನಾಶ್ವಾಗೊ ಶರೀರವನು ವಾಸುದೇವಗೆ ಸರಿಯೆಂಬೆ ಹೇಸದೆ ತಮಸಿಗೆ ಉರುಳವೊ ಪಾಪಿ ನೀ ವಾಸನೆ ಹ್ಯಾಗೆ ಬಿಡದ್ಹೋದಿ 17 ಈ ಸೃಷ್ಟಿಯೊಳಗೆ ಅಚ್ಚುತಗೆ ಸರಿಯುಂಟೆ ಮೆಚ್ಚಿ ನೀ ಮನವೆ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 18 ಭೂಮಿಯೊಳಗೆ ಶ್ರೀರಾಮನಿಗೆ ಸರಿಯುಂಟೆ ಮಾನುನೀ ಮನವೇ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?)ಎಲೆಯ ಒತ್ತಿ ಹಿಂಡಿದರೆ ರಸವುಂಟೆ 19 ಭೂಮಂಡಲದೊಳಗೆ ರಂಗಗೆ ಸರಿಯುಂಟೆ ಅಂದು ನೀ ಮನವೆ ಕೆಡಬೇಡ ಅಲ್ಲಿತ್ತಾರಾ (ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 20 ವಿಷ್ಣು ಸರ್ವೋತ್ತಮನೆಂದು ಇಟ್ಟರೆ ಮುಂಡಿಗೆಯ ಮುಟ್ಟಲಂಜಿದನೆ ಪರವಾದಿ ಪರವಾದಿ ತತ್ವದ ಬಟ್ಟೇನೂ ಕಾಣದಿರುತಿದ್ದ21 ಹರಿಸರ್ವೋತ್ತಮನೆಂದು ಇರಿಸಿದರೆ ಮುಂಡಿಗೆಯ ಹಿಡಿಯಲಂಜಿದನೆ ಪರವಾದಿ ಪರವಾದಿ ತತ್ವದ ವಿವರವನು ಕಾಣದಿರುತಿಹ 22 ಅರಣ್ಯದ ಅಡವೀಲಿ ಗೋಡೇನು ಹಾಕಿದರೆ ಯಾರು ಕೂಲೀನಕೊಡುವೋರು ಸಂಕರನ ಮತವನು ಮಾಯದಿಂ ಮೆಚ್ಚಿ ಕೆಡಬ್ಯಾಡ 23 ಅತ್ತಿಹಣ್ಣಿನಂತೆ ಮಿಥ್ಯವಾದಿಮತ ಬಿಚ್ಚಿನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಮುತ್ತಿನ ಸರವ ತೆಗೆದಂತೆ 24 ಆಲಹಂಣೀನಸಂತೆ ಮಾಯಾವಾದಿಮತ ಸೀಳಿ ನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಹೂವ್ವಿನ ಸರವ ತೆಗೆದಂತೆ 25 ಭಾಗವತ ಅರ್ಥಸಾರವೆಲ್ಲವ ತಿಳಿದು ಹೇಳಿದನೆ ತತ್ವ ಕಥೆಗಳ ಜ್ಞಾನ ಭಕ್ತಿವೈರಾಗ್ಯವ ಈವನೆ ನಮ್ಮ ಹಯವದನ 26
--------------
ವಾದಿರಾಜ
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡುದಿವಸದಿಂದಲಿ ದೃಢನಾಗಿ ಸಾಧಿಸುಕೇವಲ ಶಿವನೀನಾಗುವಿ ಆಗುವಿ ಪ ಏರಿಸು ವಾಯುವನು ಏರಿಸಿದ ಬಳಿಕಪೂರಿಸು ಕುಂಭವನು ಘಳಿಗಿಂತಿರಲಲ್ಲಿಭೇರಿಯ ಕಹಳಾರವ ಮೃದಂಗವಸಾರಿಯೆ ಕೇಳುತ ಶ್ರಮವನು ಹರಿಸುತ 1 ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕುವಾರಿಯಮೃತಧಾರೆ ತ್ರಿವೇಣಿಯಸಾರಸನದಿಯಲಿ ಮುಳುಗುತ ಮುಳುಗುತ 2 ಚಂದ್ರಮಂಡಲ ಎದುರಲಿ ಇರಲು ನೋಡುತಲಿಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲುಇಂದ್ರಾದಿಗಳಿಗಳವಡದಿಹ ಸ್ಥಾನವಾನಂದದೆ ಎರೈ ಗುರು ಕೃಪೆಯಿಂದಲಿ 3 ಕರ್ಮ ಅವಿದ್ಯೆಯನುಳಿದುತಾಮರ ಸಾಧಿಪ ನಂದದಿ ಬೆಳಗುತ4 ನಿತ್ಯ ಆಗುವುದು ತಥ್ಯಾಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯಭೋಗೈಶ್ವರ್ಯದ ಮುಕ್ತಿಗಧಿಪತಿಯಾಗು ಚಿದಾನಂದ ಗುರು ನೀನಾಗಿಯೆ5
--------------
ಚಿದಾನಂದ ಅವಧೂತರು
ನೋಡಿರೆ ಅಡ್ಡ ಬಂದ ಗ್ರಹಚಾರಮಾಡೆ ಪಾಪವ ಮನ ಆತ್ಮಂಗೆಂಬುದು ಪ ಕಳ್ಳ ಕನ್ನದಿ ಸಾಯೆ ಡೊಳ್ಳುಕೋಮಟಿಗನತಳ್ಳಿ ಶೂಲಕೆ ಏರಿಸು ಎಂಬ ಗಾದೆಜಳ್ಳು ಮನವಿದು ನಿಲದೆ ಪಾಪವನು ಮಾಡಿದರೆಆ ಪಾಪ ಆತ್ಮಗೆ ಎಂದು ಊಹಿಸುವರು 1 ಕೋಳ ಹಾಕೆಂಬ ಗಾದೆಮೂಢ ಮನವಿದು ತಾನು ಪಾಪವನು ಮಾಡಿದರೆಆಡಲೇನದ ಆತ್ಮಗೆಂದು ಊಹಿಸುವರು 2 ಮನವು ಎಂಬುದು ಆತ್ಮನಿಂದ ಸಂಚರಿಪುದುಮನವು ಆತ್ಮನೊಳು ಲಯವು ಅಹುದುಮನವು ಮೊದಲಿಗೆ ಸುಳ್ಳು ಪಾಪಗಳಿಹವೆಲ್ಲಿಮನಕುಗೋಚರ ಚಿದಾನಂದ ಶುದ್ಧಾತ್ಮನು3
--------------
ಚಿದಾನಂದ ಅವಧೂತರು
ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ ಧ್ರುವ ಮೂರು ರತ್ನದ ಪ್ರಭೆ ನೋಡಿ ಮೂರು ವಟ್ಟೆಯಾ ಮುರಿಗೂಡಿ ಆರು ಸ್ಥಳವ ಮುಟ್ಟಿನೋಡಿ ಏರಿಸು ಪಥವನು ಕೂಡಿ 1 ತುಟ್ಟತುದಿಯಲೇರಿ ನೋಡಿ ಮುಟ್ಟಿ ಚಿದ್ಘನ ಬೆರೆದಾಡಿ ನಟ್ಟನೆವೆ ಒಡಗೂಡಿ ಗುಟ್ಟುಗುಹ್ಯ ನಿಜವು ಹೇಳಬ್ಯಾಡಿ 2 ಮಹಿಪತಿ ನಿನ್ನೊಳು ನೋಡಿ ಐವರೊಂದಾಗಿನ್ನು ಕೂಡಿ ಪಾದ ಮಾಡಿ ಪಥ ಬೆರೆದಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು