ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡುದಿವಸದಿಂದಲಿ ದೃಢನಾಗಿ ಸಾಧಿಸುಕೇವಲ ಶಿವನೀನಾಗುವಿ ಆಗುವಿ ಪ
ಏರಿಸು ವಾಯುವನು ಏರಿಸಿದ ಬಳಿಕಪೂರಿಸು ಕುಂಭವನು ಘಳಿಗಿಂತಿರಲಲ್ಲಿಭೇರಿಯ ಕಹಳಾರವ ಮೃದಂಗವಸಾರಿಯೆ ಕೇಳುತ ಶ್ರಮವನು ಹರಿಸುತ 1
ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕುವಾರಿಯಮೃತಧಾರೆ ತ್ರಿವೇಣಿಯಸಾರಸನದಿಯಲಿ ಮುಳುಗುತ ಮುಳುಗುತ 2
ಚಂದ್ರಮಂಡಲ ಎದುರಲಿ ಇರಲು ನೋಡುತಲಿಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲುಇಂದ್ರಾದಿಗಳಿಗಳವಡದಿಹ ಸ್ಥಾನವಾನಂದದೆ ಎರೈ ಗುರು ಕೃಪೆಯಿಂದಲಿ 3
ಕರ್ಮ ಅವಿದ್ಯೆಯನುಳಿದುತಾಮರ ಸಾಧಿಪ ನಂದದಿ ಬೆಳಗುತ4
ನಿತ್ಯ ಆಗುವುದು ತಥ್ಯಾಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯಭೋಗೈಶ್ವರ್ಯದ ಮುಕ್ತಿಗಧಿಪತಿಯಾಗು ಚಿದಾನಂದ ಗುರು ನೀನಾಗಿಯೆ5