ಮಾವಿನಕೆರೆ 7
ಮಾನಗಿರಿಯು ಹಲವಾಭಿಮಾನ ಗಿರಿಯು ಪ
ಮಾನಗರಿ ಭಕ್ತಾಭಿಮಾನ ಮಾಂಗಿರಿಯು ಅ.ಪ
ಭಾರತದ ದಕ್ಷಿಣದಿ ನೂರೆಂಟು ತಿರುಪತಿಯೊ
ಳೋರಂತೆ ಮಹಿಮೆಗಳ ತೋರಿಸಲೈ
ಕಾರುಣ್ಯ ಪರಿಪೂರ್ಣ ಸಿರಿವೆಂಕಟಾದ್ರೀಶ
ಏರಿನಿಂದನು ನಮ್ಮ ಮಾಂಗಿರಿಯಲಿ 1
ಕಡುಸುಂದರಾಕೃತಿಯ ಬೆಡಗಿಂಗೆ ಮರುಳಾಗಿ
ನಡೆತಂದ ಮಾನವರು ಕುಡಿದೃಷ್ಟಿಬೀರಿ
ಪಿಡಿದು ಕೊಂಡೊಯ್ವೆವೆಂದಡಿಯಿಡಲು ರಂಗಯ್ಯ
ಅಡಗಿಸಿದ ದೇಹವನು ಒರಳಿನಲ್ಲಿ 2