ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲದ ಪದಾರ್ಥಕ್ಕೆ ಏನೇನೋ ಹೆಸರು ಬಿಡಿ ಪ ಬಲ್ಲೆ ಇವೆಲ್ಲಾ ನಾನೆಂಬುವರು ದುರ್ಜನರು | ನಿಜ ಅ.ಪ ನಾವೇ ದೇವರ ಮಾಡಿದೆವೋ ದೇವರು ನಮ್ಮನು ಮಾಡಿದನೋ ಭಾವಿಸಿ ನೋಡಿದರೆ ದೈವ ನಾವಲ್ಲದ್ಯಾರು 1 ವಿಷ್ಣು ಈಶ್ವರನು ಬ್ರಹ್ಮ ಎಲ್ಲಿರುವರು ನಾವೆ ವಿಶ್ವವ್ಯಾಪಕರು ವಿವಿಧ ರೂಪವಾಗಿಹೆವು 2 ಸರ್ವವೂ ಸುಳ್ಳವನಿಗೆ 3 ಬೆಳಕಿಗೆ ಕತ್ತಲು ವೈರಿ ಕತ್ತಲಿಗೆ ಬೆಳಕು ಶತ್ರು ಹೊಳವಿಗಿಂತಲೂ ಕತ್ತಲೆಯೇ ಲೇಸು ನಮಗೆ 4 ಪರಿಯಲಿ ನಿರುತ ಸಂಸಾರ ಚಕ್ರದಿ ದುರುಳರು ತೊಳಲುವರು 5
--------------
ಗುರುರಾಮವಿಠಲ
ಗುರುವು ಗುರುವು ಎಂದು ಜಗದೊಳಗಿಹರುಗುರುವು ಅದ್ಯಾತರ ಗುರುವುನರನನು ತಿಳುಹಿಯೆ ಹರನನು ಮಾಡುವಗುರುವು ಆತನೆ ಸದ್ಗುರುವು ಪ ಜ್ಞಾನವನರುಹಿ ಅಜ್ಞಾನವ ಹರಿಸುವಜ್ಞಾನಿಯಾದವ ಗುರುವುಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-ಧಾನ ಮಾಡಿದನಾತ ಗುರುವುನೀನೀಗ ನಾನೆಂದು ಸಂಶಯ ಬಿಡಿಸಿಸನ್ಮಾನ ಮಾಡಿದನಾತ ಗುರುವು 1 ಯಮ ನಿಯಮಾಸನ ಎಲ್ಲವನರುಹಿಯೆಎಚ್ಚರಿಸಿದಾತನೆ ಗುರುವುಸಮರಸವಾಯು ಮನವ ಮಾಡಿಕುಂಭಕಕಮರಿಸಿದಾತನೆ ಗುರುವುಘುಮು ಘುಮು ಘುಮು ಎಂಬ ಘಂಟಾಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವುದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿದೃಢವ ಮಾಡಿದನಾತನೆ ಗುರುವು 2 ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿದಯ ಮಾಡಿದಾತನೆ ಗುರುವುಕಟ್ಟಳಿಲ್ಲದ ತೇಜ ಖವಖವ ನಗಿಸಿಯೆದಿಟ್ಟ ಮಾಡಿದನಾತ ಗುರುವುಮುಟ್ಟಿ ತುಂಬಿದ ಬೆಳದಿಂಗಳ ಖಂಡದಿಮುಳಿಗಿಸಿದಾತನೆ ಗುರುವುಶಿಷ್ಟ ಚಿದಾನಂದ ಸದ್ಗುರುವನಮಾಡಿಸಾಕ್ಷಿ ಮಾಡಿದನಾತ ಗುರುವು 3
--------------
ಚಿದಾನಂದ ಅವಧೂತರು
ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿಜ್ಞಾನಿಗಳು ಶಾಸ್ತ್ರಿಗೇನ ಮಾಡಿದರೋಏನಾದರೂ ಪೂರ್ವದ್ವೇಷವಿತ್ತಾದರೂತಾನು ನಿಂದಿಸಿ ಕುಲಸಹ ಕೆಡಿಸುವನು ಶಾಸ್ತ್ರಿ ಪ ದನವ ಕಾಣುವ ವದನವರಿಹುತಲಿಹದನವ ಕಾಯ್ದವಗಿಂತ ಅತ್ತಿತ್ತ ಕಡೆ ಶಾಸ್ತ್ರಿಘನ ವೇದಾಂತವನೋದಿ ಜ್ಞಾನಿಗಳ ನರರೆಂಬಎನಿತುಗರ್ವ ಅಹಮ್ಮಲಿ ತನ್ನ ತಿಳಿಯ ಶಾಸ್ತ್ರಿ 1 ಓದೋದು ವೇದಾಂತ ಓದುವನಾರೆಂದು ಅರಿಯಓದಿಹೆನೆಂಬ ಗರ್ವವು ತಲೆಗೆ ಹತ್ತಿಓದಿಯೇ ಅಲ್ಲಿ ಗೆದ್ದೆ, ಇಲ್ಲಿ ಗೆದ್ದೆ ನೆಂಬಅದನೊಬ್ಬನೆಲ್ಲೋ ಇರೆ ಆರಗೆದ್ದನು ಶಾಸ್ತ್ರಿ 2 ಸಾಧುಗಳಿಗೆ ವಂದಿಸಲಿಲ್ಲ ಸಾಧುಗಳ ಮನೆ ಹೋಗಲಿಲ್ಲಸಾಧುವು ಮುಂದೆ ಹಾಯಲು ಕುಳಿತು ಏಳದಲಿಹನುಸಾಧುವ ಕಂಡು ನಡೆಯೇನು ನುಡಿಯೇನು ಎಂಬಸಾಧುವ ಭಜಿಪಗೆ ಬಹಿಷ್ಕಾರೆಂದನು ಶಾಸ್ತ್ರಿ 3 ನಾನು ಅರಿಯೆ ನಿನಗೆ ಗತಿಯೇನು ಮತಿಯೇನುನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆನಾನು ನನ್ಹೆಸರೇನು ಆರು ತಿಳಿಸುವರೆಂಬಜ್ಞಾನವಿಲ್ಲದೆ ಘಟಪದಿ ಮೆರೆದಿಹ ಶಾಸ್ತ್ರಿ 4 ನಾನೇ ಶ್ರೇಷ್ಠನೆಂದೂ ನಾನೇ ದೊಡ್ಡವನೆಂದೂನಾನು ಆರಿಹೆನೆಂಬ ಎಚ್ಚರವದು ಹೋಗಿತಾನಾದ ಚಿದಾನಂದರಾದ ಸತ್ಪುರುಷಏನೇನೋ ನಿಂದೆಯ ಮಾಡಿ ನರಕಕ್ಕಿಳಿಸುವ ಶಾಸ್ತ್ರಿ 5
--------------
ಚಿದಾನಂದ ಅವಧೂತರು
ತಾನೇ ಬ್ರಹ್ಮನಿರುತಲಿರೆತಾನೇ ವಸ್ತುವಿರುತಲಿರೆತಾನೇ ತನ್ನ ತಿಳಿಯಲಾರದೆಏನೇನೋ ಮಾಡುತಲಿಹರು ಪ ಆಸನವನು ಒಲಿದು ಒಲಿದುನಾಸಿಕದೊಳು ದೃಷ್ಟಿಯಿಟ್ಟುಸೂಸಲೀಯದೆ ಮನವ ನಿಲ್ಲಿಸಿಈಸು ಪರಿಯ ಕಾಂಬುದೇನೋ 1 ಅನ್ನವ ವರ್ಜಿಪುದಾರಿಗೆಅಡವಿಯೊಳು ಇಹುದು ಯಾರಿಗೆತನ್ನ ತಿಳಿಯಲಾರದ ದುಃಖತನ್ನ ನಿಂತು ಮಾಡುತಲಿಹುದು 2 ಚೇತನರಹಿತ ಶರೀರಕ್ಕೆಚೇತನವಾಗಿ ತಾನೆ ಇರ್ದುಚೇತನಾತ್ಮಕ ಚಿದಾನಂದಚೇತನನಾಗಿ ಆಡುತಲಿರೆ 3
--------------
ಚಿದಾನಂದ ಅವಧೂತರು
ನಾ ಕಂಡ ಕನಸು ಕನಸಲ್ಲ ಅದು ಹೇಳಲು ಬಾರದು ಕೇಳಲು ಬಾರದು ಪ ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು1 ಧ್ಯಾನವು ಗುರುಪಾದದಲ್ಲಿರೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2 ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3
--------------
ಚಿದಾನಂದ ಅವಧೂತರು
ಆರ ಮುಂಧೇಳಲಿ ಕರಕರಿಯ ಈ |ಪೋರನು ಕೊಡವಲ್ಲನಲ್ಲೇ ಸೀರೆಯ ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |ಊರೆಲ್ಲ ಹೋಗಿ ದೂರರೇನೆ1ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |ಕಾಂತನೇ ಬಂದರೇನಂತ ಹೇಳುವಾ 2ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |ಮೃತ್ಯು ಬಂದನಂಬುದರ್ತಿವೇನೆ 3ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |ಗಾರಾದೆವಲ್ಲೆ ವಾರಿಜಾಸ್ಯೆ 4ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |ಖುಲ್ಲಪೋರಗೆ ದಯೆಯಿಲ್ಲವಲ್ಲೇ 5ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |ಏಣಾಕ್ಷಿ ನಮಗೇ ಏನು ಬಂತೇ 7ಹಿಂದತ್ತ ಹೋದರೆ ಕಂಧರದುದ್ದ ನೀರು |ಮುಂದತ್ತ ಬರೆ ಎದೆಗಿಂದ ಕೆಳಗೆ 8ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |ಮಾಡಲಿನೆ ಮೋರೆ ಬಾಡಿತಲ್ಲೆ 9ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10ಏನಾದರಾಗಲಿ ಪ್ರಾಣೇಶ ವಿಠಲಗೆ |ನೀನೇ ಗತಿಯೋ ಕಾಯೊ ಎನ್ನಬೇಕೇ 11
--------------
ಪ್ರಾಣೇಶದಾಸರು