ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗ ಲಕ್ಷ್ಮಣನ ಮಂಗೀಶಾ ಪುಣ್ಯ ಸ್ಥಾಣು ಸರ್ವಾತ್ಮಕ ನೀನೆ ಮಂಗೀಶಾ ಮಾಣದೆನ್ನ ಕೈಪಿಡಿದು ಮಂಗೀಶಾ ಇನ್ಯಾ ರ್ಕಾಣೆ ನಿನಗೆ ಸಮನಾಗಿ ಮಂಗೀಶಾ ಪ ಆದಿಗನಾಗಿ ಸಿದ್ಧ ಮಂಗೀಶಾ ನಿನ್ನ ಶೋಧಿಸಿ ಕಂಡವರುಂಟೆ ಮಂಗೀಶಾ ವೇದ ಉಪನಿಷದ ನೀನೇ ಮಂಗೀಶಾ ನಿನ್ನ ಪಾದವ ನೆರೆನಂಬಿರುವೆ ಮಂಗೀಶಾ 1 ರಾಮನ ವಂಶವನೊಲಿದು ಮಂಗೀಶಾ ಬಹು ಪ್ರೇಮದಿಂದ ಸಲಹಿದಯ್ಯಾ ಮಂಗೀಶಾ ನಾಮಕ್ಕೆ ಲಕ್ಷ್ಮಣ ಎನ್ನ ಮಂಗೀಶಾ ನೀನೇ ಸ್ವಾಮಿಯೆಂದು ನಂಬಿದೆನು ಮಂಗೀಶಾ 2 ನಿನ್ನ ಬಲದಿಂದ ಸರ್ವ ಮಂಗೀಶಾ ಸುಖ ವನ್ನು ಪಡೆದೆನು ನಾನು ಮಂಗೀಶಾ ಇನ್ನು ನಿನ್ನೊಳು ಕೂಡಿಸಿಕೊ ಮಂಗೀಶಾ ಮುಂದೆ ಬೆನ್ನನು ರಕ್ಷಿಸಿ ಕಾಯೋ ಮಂಗೀಶ 3 ಯಾರಿಗುಸುರಲಿ ನಾನು ಮಂಗೀಶಾ ಸರ್ವ ಭಾರಕರ್ತೃ ನೀ ಸಲಹೋ ಮಂಗೀಶಾ ದಾರಿಯ ತೋರಿಸೋ ಎನಗೆ ಮಂಗೀಶಾ ನಿನ್ನ ಸೇರಿ ಬದುಕುವೆ ನಾನು ಮಂಗೀಶಾ 4 ಏನೇನರಿಯೆನೆಲೊ ನಾನು ಮಂಗೀಶಾ ನಿನ್ನ ಧ್ಯಾನಿಸಲೊಂದೆ ಬಲ್ಲೆ ಮಂಗೀಶಾ ಹಾನಿ ವೃದ್ಧಿನಿನ್ನದು ಶ್ರೀ ಮಂಗೀಶಾ ಎನ್ನ ಮಾನಾಭಿಮಾನದ ಕರ್ತೃ ಮಂಗೀಶಾ 5 ಅರಿಕೆ ಇಲ್ಲದುಂಟೆ ನಿನಗೆ ಮಂಗೀಶಾ ದುಷ್ಟ ಅರಿಗಳ ಮಾಯಾಜಾಲವು ಮಂಗೀಶಾ ಸ್ಮರನ ದಹಿಸಿದಂತೆ ನೀನು ಮಂಗೀಶಾ ಅವರ ನುರುಹಿ ತೋರೋ ಎನ್ನೊಡೆಯ ಮಂಗೀಶಾ 6 ಬರದು ಬಿನ್ನವಿಸಿದೆ ನಾನು ಮಂಗೀಶಾ ಚಿತ್ತ ವಿರಲಿ ಅಣುಗನ ಮೇಲೆ ಮಂಗೀಶಾ ಸ್ಥಿರದಿ ಕುಶಸ್ಥಲವಾಸಿ ಮಂಗೀಶಾ ಶ್ರೀ ಗುರು ವಿಮಲಾನಂದ ಚೆಲುವ ಮಂಗೀಶಾ 7
--------------
ಭಟಕಳ ಅಪ್ಪಯ್ಯ