ಏನೆನ್ನುತ್ಹಳಿಯಲಿ ನಿನ್ನ | ನಾನಾವಿಧದಿ
ಬೆಳಗುವ ಮಹಮಹಿಮನ ಪ
ಸಾಗರ ನಿಲಯನೆಂದೆನಲೇ
ನೀಗದ್ವೊಯ್ಕುಂಠ ಮೇಲು ಮಂದಿರನ
ರಾಗದಿಂ ದ್ವಾರಕೆ ಪುರಮನೆಯವನೆನಲೇ
ಯೋಗದಿಂದಣುರೇಣುತೃಣದಿ ವ್ಯಾಪಕನ 1
ಪನ್ನಂಗ ಹಾಸಿಗೆ ಮಾಡಿಹ್ಯನೆನಲೇ
ಉನ್ನತ್ಹಾಸಿಗೆಯ ಮೇಲೆ ಮಲಗಿಕೊಳ್ವವನ
ಭಿನ್ನವಿಲ್ಲದೆ ದರ್ಭೆಶಾಯಿಯೆಂದೆನಲೇನು
ಚಿನ್ನಮಂಚದ ಮೇಲೆ ಲೋಲ್ಯಾಡುವವನ 2
ಹೊಟ್ಟಿಗ್ಹುಲ್ಲ ತಿಂದವನೆನಲೇ
ಶಿಷ್ಟ ದಿವಿಜರಿಟ್ಟ ಮೃಷ್ಟಾನ್ನುಣ್ವವನ
ಕೊಟ್ಟ ಹಣ್ಣಿನ ತೋಟ ಹಸಿದು ತಿಂದವನೆನೆ
ಸೃಷ್ಟಿ ಈರೇಳಕ್ಕೆ ಅನ್ನ ಕೊಡುವವನ 3
ಅಸುಬಿಟ್ಟ ದಿಕ್ಕಿಲ್ಲದನೆನಲೇ
ಅಸಮಲಬಲವುಳ್ಳಂಥ ಯಾದವಾರ್ಯನ
ಕುಸುಮನಾಭಂಗೆ ಸಂಸಾರಿಯೆಂದೆನಲೇನು
ಎಸೆವ ಪರವಸ್ತು ನಿರ್ಬಯಲು ನಿರ್ಮಯನ 4
ಅಳವಲ್ಲ ಎನಗೆ ನಿನ್ನ
ವೊಲಿರೆ ದಿವ್ಯ ಮಹಿಮೆ ತಿಳಿಯುವ ತ್ರಾಣ
ಒಲಿದು ಚರಣದಾಸರಾಳಾಗಾಳುವೆನೆಂದು
ಇಳೆಯೊಳು ಸಾರುವೆ ನಳಿನಾಕ್ಷ ಶ್ರೀರಾಮ 5