ಸೋಮಶೇಖರ ತಾನೆ ಬಲ್ಲ ಶ್ರೀ-ರಾಮನಾಮಾಮೃತ ಸವಿಯನೆಲ್ಲ ಪ
ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ 1
ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ2
ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ 3
ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ4
ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ 5
ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ6
ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ7