ಏಳು ನಿದ್ದೆಯು ಸಾಕು ರಂಗನಾಥ ಪ
ತಾಳು ತಾಳೆನಲೇಕೆ ಮಾಂಗಿರಿ ನಿವಾಸ ಅ.ಪ
ಜಗವ ಪೋಷಿಪಚಿಂತೆ | ಮಿಗಿಲಾದ ದೇವಂಗೆ
ಸೊಗಸಾದ ನಿದ್ದೆಯಾಪರಿವುಂಟೇ
ನಗಜಗವ ಪೊತ್ತವನ ಬಳಗವು ಏನೆಂಬೇ
ನಗೆಬೇಡ ಕಣ್ತೆರೆಯೊ ಮಾಂiÀiಕಾರ 1
ನಿದ್ದೆಗೆಡಿಸಲು ಪಾಪ ಇದ್ದರೆ ನನಗಿರಲಯ್ಯ
ಸದ್ದಿಲ್ಲದಿಹುದೇ ಭಕ್ತರು ಹಾಡಿ ಕುಣಿಯೇ
ಒದ್ದಮುನಿಗಾ ಪಾಪವಿದ್ದಿತೇ ಕರುಣಾಳು
ಎದ್ದು ಬಾ ಬಾರೈಯ ಮಾರನಯ್ಯ 2
ಬಲ್ಲೆ ಬಲ್ಲೆನು ನಿನ್ನ ಚೆಲ್ಲಾಟಗಳನೆಲ್ಲ
ಬೆಲ್ಲವನು ಕಂಡಿರುವೆ ಮುತ್ತದಿಹುದೇ
ಸಿರಿ ಮಾಂಗಿರಿಯ ರಂಗ
[ಒಲ್ಲೆನದೆ ಈಯಯ್ಯ ಎನಗು ಬೆಲ್ಲದಸವಿಯ]3