ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಸುವರಗಳು ಇಲ್ಲದಿದ್ದರೆ ಇವ | ನಲ್ಲದೆ ಮತ್ತಾರಾ | ವಲ್ಲಿ ಕಾಣದೆ ಪೋದೆ ಪ ಸಾರುವ ಶರೀರ ಧರಿಸಿ ಬಾಳಿದ ಮಹಾ | ಭಾರವಾಗಿದ್ದ ಪಾಷಾಣವ ಪೊತ್ತವ | ಗೊರುವ ನೆಲನಂದು ಕಾಷ್ಟದಿಂದಲಿ ಬಂದ | ಹಾರುವನಾಗಿ ತಿರದುಂಡು ಕುಲಧರ್ಮ | ಮೀರಿ ನಡೆದವ ಉಪವಾಸದವÀನಿಂದ | ಊರ ಎಂಜಲಿಗೆ ಹೇಸದೆ ಓಡಾಡಿದವ | ನಾರಿಯರ ವ್ರತ ಕೆಡಿಸಿ ರಾವುತನಾಗಿ | ಕಾಯ | ಆರಿಂದ ಜನಿತನಿವ ನೋಡಲಾಗಿ | ಧಾರುಣಿಯೊಳಗಿದ್ದವ ಸರ್ವರನ್ನ | ಮೀರಿ ನಡೆತÀಲಿದ್ದವ ಇವಗೆ ಮೆಚ್ಚಿ | ಧಾರಿ ಎಂದ ನಿನ್ನ ಮಗಳೆ ಬೇಕೆಂದವ 1 ಬಿರಿಗಣ್ಣೆನವನಿವ ಆವಾವ ಕಾಲಕ್ಕೆ | ಶಿರವಾಗಿ ಕೊಂಡಿಪ್ಪ ಶೀಲ ಸ್ವಭಾವದಿ | ಕೊರಳ ತಿರುಹಲಾರ ಕರುಳ ಮಾಲೆಯುವ | ಪರರ ಬಾಗಿಲ ಕಾವರಾಜ್ಯವಿಲ್ಲದವ | ಸುರರ ಕೋತಿಯ ಮಾಡಿ ಕುಣೆಸಾಡಿದವನಿವ | ದಿಗಂಬರನಾಗಿ ಚರಿಸಿದೆನೆಂದು ಕೋಪದಿಂದ | ಕರವಾಳ ಹಸ್ತದವ || ಪರಾಕ್ರಮ ಉರಗನ್ನ ಮೇಲಿದ್ದವ ಇವನ ಖೂನ | ಅರಿಯನು ದಾವದಾವ | ಭೇದವನಿಕ್ಕಿ | ತಿರುಗಿಸುವನು ಲೋಕವ ವಂಚಕನಿಗೆ | ಪರಮ ಪ್ರೀತಿಯಿಂದ ಕೊಟ್ಟದನೆಣಿಸುವ 2 ತನ್ನ ಜಾತಿಗಳನ್ನು ನುಂಗುವನವನಿವ | ಬೆನ್ನ ಮೇಲಿನ ಒಂದೆ ಬುಗುಟಿ ಪಲ್ಲಿನ ತುದಿ | ಮಣ್ಣು ತೋರುವನಿವ ವಿಕಾರ ಮೊಗದವ | ಕಣ್ಣು ಚುಚ್ಚಿದ ಒಬ್ಬ ಹಾರವನ್ನು ನೋಡಿ | ಹೆಣ್ಣಿಗಭಯವಿತ್ತು ಕಾದಿ ಸೋತವನಿವ | ರಣ್ಯ ವಾಗನಿವ ರಣದೊಳೋಡಿದನಿವ | ಅನ್ಯಾಯ ಪೇಳಿದ ನಂಬಿದವರಿಗೆ | ಮುನ್ನೆ ಕುದುರಿಯೇರಿದಾ ಇವನು ತಾನೆ | ಅನಂತ ಮಾಯಮೋದಾ ಎಂಥವರಲ್ಲಿ | ಪಾದ ಇಟ್ಟು ಇದ್ದು | ಕಣ್ಣಿಗೆ ಪೊಳಿಯೆ ಖೇಡ ಬಡಿಸವಂಥ | ಬಣ್ಣಾಣಿಗಾರನು ಬಂದೆಲ್ಲಿ ದೊರಕಿದಾ 3 ಮೀಸಿ ಕಟ್ಟಿಸಿಕೊಂಡಿವನೀವ ಪ್ರಳಯಾದಿ | ದ್ವೇಷವನಿಕ್ಕಿದ ದೇವದಾನವರಿಗೆ | ಏಸು ದಿವಸವಾಗೆ ಅದೋ ದೃಷ್ಠಾಯವನಿವ | ಭಿಕ್ಷೆ ಪಾತ್ರಿಯವ | ಬಿಗಿಯನೆ ಮುರದು ಬಿಟ್ಟವನಿವ | ಕೊಂಡ ಲಜ್ಜೆಗೇಡಿ | ಘಾಸೆತನಕೆ ಶೂರನು ಒಮ್ಮ್ಯಾದರು || ಮಾಡುತಲಿಪ್ಪನು ಇವನು ಹೆಣ್ಣು | ವೇಷ ಧರಿಸಿಕೊಂಬನು ಕೇವಲ ಅವ | ಕಾಶ ಯಿಲ್ಲದ ಸ್ಥಾನದಲ್ಲಿ ವೊಂದಿಪ್ಪನು 4 ದೃಷ್ಟಿ ಮುಚ್ಚದಿಪ್ಪನವನಿವ ಆವಾಗ | ಬೆಟ್ಟವೆ ಗತಿ ಎಂದು ಸೇರಿಕೊಂಡವನಿವ | ದಿಟ್ಟ ಕಠೀಣ ಕಾಯದವನಿವ ಎದುರಿಗೆ | ಎಷ್ಟಗಲ ಬಾಯದೆರೆದಿಪ್ಪ ಪಾದದ | ಬಟ್ಟಿನಿಂದಲಿ ನೀರು ಸುರಿಸುವ ಬಗೆ ಉಂಟು | ಕುಟ್ಟಿ ಮಾತೆಯ ಶಿರ ಕೆಡಹಿದನಿವ ಜಡೆ | ಗಟ್ಟಿಪ್ಪ ಚೋರನಾಯಕ ಮೌನಪ್ರಾಂತಕ್ಕೆ | ದುಷ್ಟನೆನಸಿ ಮೆರೆವ ಹತ್ತದೆಂದು || ಅಟ್ಟಿಬಿಟ್ಟರೆ ಬರುವ ತನ್ನೆಲ್ಲಿಗೆ | ಕೆಟ್ಟವರನ ಕರೆವ ಉತ್ತಮರನ್ನು | ಪಟ್ಟದ ರಾಣಿಗೆ ಪೇಳದೆ ಜವಾ | 5 ಜಲದೊಳಗಾಡುವನಿವ ಹೊರೆ ಹೊತ್ತು | ಕಲೆಪರಟಿಯಾಗಿ ತಿರುಗುವನಿವ ಮೂಗಿಲ್ಲಿ | ಳಿದು ಬಂದವನಿವ ಗೊಗ್ಗರÀ ಧ್ವನಿಯವ | ತಲುವರಿ ಇವ ತಾನೆ ಶಿಷ್ಯಗೆ ವಿದ್ಯವÀ | ಕಲಿಸಿ ಶ್ಯಾಪವ ಕೊಟ್ಟನವನಿವ ವೈರತ್ವ | ಬಳಸದವನ ಮೇಲೆ ಕಲ್ಲು ಹಾಕಿಸಿದವ | ಬಲು ಭಂಡುಗೋವಳ ಅನ ಬರದದು ಬಿಟ್ಟು | ಕಲಿಯಾಗಿ ಓಡಾಡಿದ | ಹೆರರಿಗಾಗಿ ಸ್ತಳ ದ್ರವ್ಯವ ಮಾಡಿದಾ ದಾನವರಿಂದ | ಬಲವಾವನು ಬೇಡಿದಾ ಬೊಮ್ಮಾಂಡದ | ಒಳಗೆ ಹೊರಗೆ ಕಾಡಿದಾ | ಬಹು ಠಕ್ಕನು | ತಿಳಿದು ತಿಳಿದು ಈರ್ವರಿಗೆಯಲ್ಲಿ ನೋಡಿದಾ 6 ಸವಿ ನೋಡದದರ ರೂಪನಾದವನಿವ | ಅವಯವಂಗಳೆಲ್ಲ ಮುದುರಿಕೊಂಡಿಪ್ಪಾನಿವ | ಅವನಿಗೋಡಿ ಪೋದನಿವ ಮೃಗವಲ್ಲ ಮಾ | ನವನಲ್ಲ ವದ್ಭೂತನಾಗಿ ತೋರುವನಿವ | ಬವರಿಗಾದವನಿವ ತನ್ನ ಕಾಲಕೆ ತಪ್ಪ | ಭವನವಿಲ್ಲದೆ ದಿನ ಕಳೆದವ ಯಾಗದ | ನ್ನವನುಂಡು ನಾನಾ ಶಸ್ತ್ರವನ್ನು ನುಂಗಿದವನಿವ || ಯುವತಿ ಧರಿಸಿದ ಸಂಗಾ ಹಾ | ರುವ ಪಕ್ಕಿ ದಿವಸ ದಿವಸ ತುರುಗಾನಾಗಿಪ್ಪದು | ಅವಧೂತ ಮಾರ್ಗ ತುಂಗಾ | ಪರ್ವತವನು | ಲವಕಾಲಬಿಡದೆ ಬಾಯಲಿ ಕಚ್ಚಿದ ರಂಗಾ 7 ಮಾರಧ್ವಜನನವತಾರ ತಾಳಿದನಿವ | ನೀರೋಳಗಡಿಗಿಪ್ಪ ಎರಡು ಭಾಗಗಲ್ಲಿ | ಕೋರೆಗಳದ್ದಿ ಮಸÀದು ಮತ್ಸರಿಸುತಿಪ್ಪ | ಚೀರಿ ಕೂಗುವ ಮಹಾ ಬೊಮ್ಮಾಂಡವಡದಂತೆ | ಮೂರಡಿಯೊಳಗೆ ತ್ರಿಲೋಕವÀನಿಟ್ಟವ | ಬೇರು ಕಡುವನಂತೆ ಕೊಡಲಿಕಾರನಿವ | ಆರೋಗಣಿಗೆ ಶಬರಿಯ ಹಣ್ಣು ಮೆದ್ದವ | ಬುದ್ಧ ಉದ್ದಂಡಾ ಏಕನು ಇವ || ಕೊಂಡ ಬಹು ಕಡೆ | ಬೀರಿದನ್ನವ ಕೈಕೊಂಡಾ ಒಂದು ತುತ್ತು | ಆರಗೀಯದಲೆ ಉಂಡಾ ಇವನನ್ನು | ಹಾರೈಸಿದವರಿಗೆ ಏನು ಲಕ್ಷ ಹೆಚ್ಚಳ ಕಂಡಾ 8 ಉದಕ ಬಿಟ್ಟರೆ ಬದುಕಲಾರದವನಿವ | ಎದೆಗಟ್ಟಿಯವನಲ್ಲಿ ಮುಟ್ಟಿ ನೋಡಿದರೆ | ಪೊದೆ ಪೊದರಿನೊಳು ಸೇರಿ ಕೊಂಡವನಿವ | ಎದುರಿಗೆ ಒಬ್ಬರ ಬರಗೊಡದವ ತನ್ನ | ಪದದ ಕೆಳಗೆ ಕೊಟ್ಟವನ ಇಟ್ಟವನಿವ | ಮದಕಾವ ಮಾಡಿ ತನ್ನೊಳು ತಾನೆ ಸೋತವ | ಸುದತಿಯುಳಟ್ಟಿದ ಪಾರ್ಥಗಾಳಾದ | ಚದುರ ಕ್ರೂರರಿಗೆ ಕ್ರೂರಾ ನಿರಂತರ | ಉದಧಿ ಎಂಬೊದೆ ಮಂದಿರಾ ಇವಗೆ ನೋಡು | ಬದರಿ ಗಿಡವೆ ಆಸರಾ ಏನೆಂಬೆನೊ | ಕದರು ಮೋರಿಯೆ ಶೃಂಗಾರ ತನ್ನಯ ಗುಣ | ಮೊದಲಿದೆ ಕಡೆ ಎಂದು ಆರಾರಿಗೆ ತೋರಾ 9 ಚಪಲಾಕ್ಷದವನಿವ ಚಲುವನೆಂತೆಂಬೆನೆ | ವಿಪರೀತ ನಿದ್ರೆ ಮಾಡುವನಿವ ಕರೆದರೆ | ಕುಪಿತವಾಗುವ ಕಿಡಿ ಉಗುಳುವನಿವ | ಕಪಟದಲ್ಲಿ ಗಟ್ಟಿ ತಲೆ ಹೊಡಕ ರಾಮ | ಕಪಿಯ ಮೋಸದಿಂದ ಕೆಡಹಿದ ಮಾವನ್ನ | ನಿಪತನ ಗೈಸಿದ | ದೋಷಕ್ಕೆ ಶಂಕಿಸಾ | ತ್ರಿಪುರವ ಕೆಡಸಿದ ಹರಗೆ ಸಾಯುಕವಾಗಿ | ಅಪಕಾರಿ ಝಗಳಗಂಟ ಒದಿಸಿಕೊಂಡ || ವಿಪುಳದೋಳೇನು ಒಂಟಾ ಉಚ್ಚರಿಸುವೆ | ಕೃಪಣ ಜನರಿಗೆ ನೆಂಟಾಸನಕ್ಯಾದರ | ಶಪತದಲ್ಲಿಗೆ ಪೊರವಂಟಾ ಉತ್ತಮರಿಂದ | ಉಪದೇಶವಿಲ್ಲದ ಬಾಳುವ ಮಹಾತುಂಟಾ 10 ಇವರೀರ್ವರಿಗೆ ಈಡೆ ತಪ್ಪಿಸಲು ಪದ್ಮ | ಭವಗಳವಲ್ಲವು ನಿನ್ನ ಕುವರಿಗೆ | ಸವಿಗಾರ ಇವನಲ್ಲದೆ ಮತ್ತಾವಾವಾ | ವಿವರಿಪೆ ಎಂಥವರಕೆ ಅಂಥ ಕನ್ನಿಕೆ | ಹವಣವಾಗಿದೆ ಸತ್ಯ ಸಂಕಲ್ಪವೆ ಸಿದ್ಧಾ | ಶ್ರವಣಾದಿ ಇಂದ್ರಿಂಗಳಿಗಗೋಚರಾ | ಸ್ಥವಿರ ಯೌವನ ಬಾಲ ಒಂದಾದರಿವನೆಲ್ಲಾ | ನವನವ ಬಗೆ ಸುಕಾಯಾ || ಮೋಹನ್ನ ಯಾ | ದವರಾಯಾ ಶಿರಿ ವಿಜಯವಿಠ್ಠಲ ಕೃಷ್ಣ | ಶಿವಕುಲ್ಲ್ಯ ಪುರಿ ನಿಲಯಾ ಭಕ್ತರ ಪ್ರೀಯಾ | ಮಾಯಾ ಜಗದ್ಗುರು | ಪವನವತಾರ ಶ್ರೀ ಆನಂದ ಮುನಿಗೇಯಾ11
--------------
ವಿಜಯದಾಸ
ಹೆಂಡಿರನಾಳುವಳೀ ಕನ್ನಿಕೆ |ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪಅಂಥಿಂಥಿವಳೆಂದು ಅಳವಡಿಸಲು ಬೇಡ |ಇಂಥ ಸೊಬಗನಂತ ಏನೆಂಬೆನೊ ||ಸಂತತಸುರ - ದನುಜರಿಗೆ ಪ್ರಪಂಚದಿ |ಪಂಕ್ತಿಯೊಳಮೃತವ ಬಡಿಸಿದಳು 1ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |ಅಸುಮಯಜಲದಲಿ ಮಲಗಿ ಮೈಮರೆದಳು ||ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ 2ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |ಭೋಗದ ಸೊಗತೋರಿ ಬೂದಿಯ ಮಾಡಿ ||ಭಾಗೀರಥಿಯ ಪಿತ ಬೇಲೂರ ಚೆನ್ನಿಗ |ಯೋಗಿ ಪುರಂದರವಿಠಲನೆಂಬ3
--------------
ಪುರಂದರದಾಸರು