ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಹರಿಗುರು ಕರುಣದಿ ದೊರಕಿದುದೆನಗೀ ಪರಮ ಪಾವನ ತಂಬೂರಿ ಪ. ನರÀಹರಿ ಭಕ್ತರು ಒಲಿದೆನಗಿತ್ತರು ಸುಲಲಿತ ನಾದದ ತಂಬೂರಿ ಅ.ಪ. ತಂದೆ ಮುದ್ದುಮೋಹನರು ಸ್ವಪ್ನದಿ ತಂದು ತೋರಿದಂಥ ತಂಬೂರಿ ನಂದ ಕಂದನ ಗುಣ ಅಂದದಿ ಸ್ತುತಿಸೆ ಆ- ನಂದವ ತೋರುವ ತಂಬೂರಿ ಇಂದಿರೇಶನ ಭಕ್ತರಂದದಿ ಧರಿಸುವ ರೆಂದೆಂದಿಗು ಈ ತಂಬೂರಿ ನೊಂದು ಭವದೊಳು ತಪ್ತರಾದವರಿಗೆ ಬಂಧನ ಬಿಡಿಸುವ ತಂಬೂರಿ 1 ಅಂತರಭಕ್ತರು ಹರುಷದಿ ನುಡಿಸುವ ಕಂತುಪಿತಗೆ ಪ್ರೀತಿ ತಂಬೂರಿ ಸಂತತ ಮಾನಾಭಿಮಾನವ ತೊರೆದು ಏ- ಕಾಂತದಿ ಸುಖಿಸುವ ತಂಬೂರಿ ಶಾಂತದಿ ನಾರದಾದಿಗಳು ವೈಕುಂಠದಿ ನಿಂತು ನುಡಿಸುವಂಥ ತಂಬೂರಿ ಪಂಥದಿ ಹರಿಪಾದಂಗಳ ಭಜಿಸೆ ನಿ- ಶ್ಚಿಂತೆಯ ಮಾಳ್ಪಂಥ ತಂಬೂರಿ2 ಬಲು ಬಲು ಪರಿಯಲಿ ಹರಿದಾಸತ್ವಕೆ ಬರುವಂತೆ ಮಾಡಿದ ತಂಬೂರಿ ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ ಒಲುಮೆಯಿಂದಲಿ ಈ ತಂಬೂರಿ ನೆಲೆಯಾದೆನು ಹರಿದಾಸರ ಮಾರ್ಗದಿ ಕಲುಷವ ಕಳೆದಿತು ತಂಬೂರಿ ಸುಲಭದಿಂದ ಶ್ರೀ ಗುರುಗಳು ಕರುಣಿಸಿ ನೆಲೆಗೆ ನಿಲಿಸಿದಂಥ ತಂಬೂರಿ 3 ಶ್ರೀನಿವಾಸನು ತಾ ಕೊಡಿಸಿದನು ಏನೆಂಬೆನು ಈ ತಂಬೂರಿ ಮಾನಾಭಿಮಾನವ ತೊಲಗಿಸುವುದಕೆ ಕಾರಣವಾಗಿಹ ತಂಬೂರಿ ಶ್ರೀನಿಧಿ ಸೊಸೆ ಬಹು ಆನಂದದಲಿ ತಾ ನುಡಿಸುವಳೀ ತಂಬೂರಿ ಗಾನಲೋಲ ಕೃಷ್ಣ ತಾನೊಲಿವುದಕೆ ಕಾರಣ ಮಾಡಿಹ ತಂಬೂರಿ 4 ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ ಕೊಟ್ಟೀ ಕೊಟ್ಟನು ತಂಬೂರಿ ಎಷ್ಟು ನಾಚಿಕೆಪಟ್ಟರು ಬಿಡದಲೆ ಕಷ್ಟ ಕಳೆಯಲಿತ್ತ ತಂಬೂರಿ ಭವ ಕಟ್ಟು ಇಂದೆನ್ನನು ಮುಟ್ಟಿಸಿತ್ಹರಿಪುರ ತಂಬೂರಿ ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ ಕೃಷ್ಣವಿಠ್ಠಲನಿತ್ತ ತಂಬೂರಿ 5
--------------
ಅಂಬಾಬಾಯಿ
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ
ನೀನೆ ಗತಿ ಶ್ರೀಪತಿ ನೀನೆ ಗತಿ ನಿರಾಕೃತ ದಾನವತತಿ ದೀನಾನುಕಂಪಿತ ಮತಿ ಪ. ಏನೆಂಬೆನು ನಿನ್ನಯ ಕರುಣಾ ಪವಮಾನ ಮತಿಯ ಜನಾದರಣಾ ದೀನಬಂಧು ದುರಿತೌಘ ನಿವಾರಣ ಶುಭ ಸಂಚಯ ಕರಣ 1 ನಿರವಧಿ ಸುಖದಾಯಕ ನಿನಗನ್ಯರು ಸರಿಯಂಬರು ನರಕದಿ ಹೊರಳುವರು ಚರಣಯುಗ್ಮಸರಸಿಜವಿಂತಿರಲು ಬರಿದೆ ಭವದಿ ತಿಳಿಯದೆ ಬಳಲುವರು 2 ಸ್ಮರಣೆ ಮಾತ್ರದಿಂದೊಲಿವ ಮನವರಿತು ಪಾಡಿದರೆ ನಲಿವ ಸಿರಿಸಮೇತ ಮಂದಿರದೊಳಗಿರುವ ಉರಗ ಗಿರೀಂದ್ರನ ಶಿರದಲಿ ನಲಿವ 3
--------------
ತುಪಾಕಿ ವೆಂಕಟರಮಣಾಚಾರ್ಯ