ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ
ಚರಣದೊಳದೃಷ್ಟಿಯಿರಿಸಿ ಪ.
ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ
ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ 1
ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು
ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು 2
ವರ ಶ್ರುತಿಸ್ಮøತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು
ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು 3
ಬಾಗಿ ಪೊರೆವ ದೊರೆಯೆ
ಕಂಭದಲಿ ತೋರ್ದ ಸಿರಿಯೆ 4
ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ
ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ 5