ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ
ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ
ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು |
ನೆಲವಿನ ಅಡಕಲ ನೋಡಿ ಅದು |
ನಿಲಕದಲಿರೆ ಕೈಗೂಡಿ ಕಡ |
ಗೋಲಿಲಿ ಯಜ್ಞ ಮಾಡೀ |
ಗೆಳೆಯರ್ವೆರ ಸೈದ ಬಲುಸೂರ್ಯಾಡಿ |
ಸಿಲುಕದ ಲ್ಹೋಗುವ ಪೋಡಿ | 1
ಇಕ್ಕಿದ ಕದಗಳು ಇಕ್ಕಿರಬೇಕು |
ಫಕ್ಕನೆ ಮನೆಯೊಳು ಸುಳಿದು |
ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು
ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು2
ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು
ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು |
ಶ್ರೀನಿಧಿ ಗುರುಮಹಿಪತಿ ಪ್ರಭುವಿನ |
ಅನುಮಾನದಲೇ ದೂರುವುದು3